ಹುಬ್ಬಳ್ಳಿ : ಮತಾಂತರಕ್ಕೆ ಯತ್ನಿಸಿದ ಆರೋಪಿಗಳ ಪರ ಡಿಸಿಪಿ ನಿಂತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದಿಸಿದ ವ್ಯಕ್ತಿ ವಿರುದ್ದ ಕೊನೆಗೂ ದೂರು ದಾಖಲಾಗಿದೆ.
ಹುಬ್ಬಳ್ಳಿಯ ಅಶೋಕ ಅಣ್ವೇಕರ್ ವಿರುದ್ದ ನವನಗರ ಠಾಣೆಯಲ್ಲಿ ಸ್ವತಃ ಡಿಸಿಪಿ ಕೆ ರಾಮರಾಜನ್ ದೂರು ದಾಖಲಿಸಿದ್ದಾರೆ.ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ,ಧರ್ಮ ನಿಂದನೆ, ಶಾಂತಿ ಭಂಗ್ ಕೇಸ್ ದಾಖಲಿಸಲಾಗಿದೆ.
ಮತಾಂತರ ವಿರೋಧಿಸಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ವಕೀಲ ಹಾಗೂ ಹಿಂದೂ ಸಂಘಟನರ ಮುಖಂಡ ಅಶೋಕ ಅಣ್ವೇಕರ ಡಿಸಿಪಿಯನ್ನ ಅವಾಚ್ಯ ಶಬ್ಧದಿಂದ ನಿಂದಿಸಿದ್ದರು. “ಹರಾಮ್ ಕೋರ್” ಡಿಸಿಪಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅದೇ ಸಂದರ್ಭದಲ್ಲಿ ಡಿಸಿಪಿ ಕೂಡ ಅದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಅಶೋಕ ಅಣ್ವೇಕರ್ ಸೇರಿ ಪ್ರತಿಭಟನೆಯಲ್ಲಿ 100 ಜನ ಭಾಗಿಯಾಗಿದ್ದರು.
ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಯ 100 ಕಾರ್ಯಕರ್ತರ ವಿರುದ್ಧವೂ ದೂರು ದಾಖಲಾಗಿದೆ. IPS ಸೆಕ್ಷನ್ 504, 143, 147, 153, 295A, 298, 353 ಅಡಿ
ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.