ಹುಬ್ಬಳ್ಳಿ : ಕುಮಾರಸ್ವಾಮಿ ಸುಳ್ಳು ಹೇಳ್ತಾರೆ, ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ, ಇವರು ಬರೀ ಸುಳ್ಳು ಹೇಳುವುದು ಮಾಡ್ತಾರೆ. ಕುಮಾರಸ್ವಾಮಿ ಹಿಟ್ ರನ್ ಕೇಸ್ ಮಾಡ್ತಾರೆ, ಅವರೊಬ್ಬ ಸುಳ್ಳ ಎಂದು ಅದಕ್ಕೆ ನೋ ರಿಯಾಕ್ಷನ್ ನೋ ರಿಯಾಕ್ಷನ್ ಎಂದು ಕುಮಾರಸ್ವಾಮಿ ವಿಚಾರಕ್ಕೆ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಪ್ರಚಾರಕ್ಕೆ ಬರಬಹುದು, ಬರೋದಕ್ಕೆ ಬೇಡ ಅಂದವರ್ಯಾರು, ಪಕ್ಷದ ಎಲ್ಲರಿಗೂ ಕರೆದಿದ್ದೇವೆ ಕಾಂಗ್ರೆಸ್ ಕಚೇರಿಯಿಂದ್ಲೇ ಹೇಳಲಾಗಿದೆ ಯಾರಿಗೂ ಬೇಡ ಎಂದಿಲ್ಲ, ಇದು ಯಾರ ಮನೆ ಕೆಲಸ ಅಲ್ಲ, ಪಕ್ಷದ ಕೆಲಸ ಎಂದರು.
ಆರ್.ಎಸ್.ಎಸ್ ಒಂದು ಕೋಮುವಾದಿ ಸಂಘಟನೆ,
ಮನುಸ್ಮೃತಿ, ಶ್ರೇಣೀಕೃತ ಸಂಘಟನೆ, ಹೀಗಾಗಿ ಆರ್ ಎಸ್ ಎಸ್ ನ್ನು 1971 ರಿಂದಲೂ ನಾನು ವಿರೋಧ ಮಾಡ್ತಾ ಬಂದಿದ್ದೆನೆ. ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನ ಆರ್.ಎಸ್.ಎಸ್ ಮಾಡ್ತಿದೆ, ಬಿಜೆಪಿಯಲ್ಲಿ ಒಬ್ಬರಾದ್ರೂ ಮುಸ್ಲಿಂ ಎಂ.ಎಲ್.ಎ ಇದ್ದಾರಾ? ಎಂದು ಪ್ರಶ್ನೆ ಮಾಡಿದರು. ಆರ್.ಎಸ್.ಎಸ್ ಅಲ್ಪಸಂಖ್ಯಾತರ ವಿರುದ್ಧ ಇರೋದು,
ಈಶ್ವರಪ್ಪ ಮುಸ್ಲಿಂರಿಗೆ ಬಂದು ಆಫೀಸ್ ನಲ್ಲಿ ಕಸಾ ಹೊಡಿ ಅಂತಾರೆ ಇದು ಮಾನವೀಯತೆನಾ?
ಸಂವಿಧಾನ ಬದಲಾವಣೆ ಮಾಡ್ತಿನಿ ಅಂತಾರೆ, ಸಂವಿಧಾನ ಬರೆದವರು ಯಾರು? ಸಂವಿಧಾನದ ವಿರುದ್ಧ ಇರುವವರೇ ಈ ಬಿಜೆಪಿಯವರು ಎಂದರು.
ಸಂಗೂರು ಮೈಶುಗರ್ ಕಾರ್ಖಾನೆ ವಿಚಾರವಾಗಿ ಹೇಳಿಕೆ ನೀಡಿದ ಅವರು, ಕಾರ್ಖಾನೆ ಅಧ್ಯಕ್ಷರಾಗಿದ್ದವರು ಯಾರು?
ಅಧ್ಯಕ್ಷ ಉದಾಸಿ, ಸಜ್ಜನರ್ ಉಪಾಧ್ಯಕ್ಷ ಆಗಿದ್ದರು, ಇದನ್ನು
ಕಾಂಗ್ರೆಸ್ ನವರು ಯಾಕೆ ಹಾಳು ಮಾಡ್ತಾರೆ, ಸಜ್ಜನ ಉಪಾಧ್ಯಕ್ಷ, ಉದಾಸಿ ಅಧ್ಯಕ್ಷ ಆದಾಗ ಹಾಳಾಯ್ತು, ಜನ ಖಾರ್ಖಾನೆ ಬಗ್ಗೆ ಕೇಳುತ್ತಿದ್ದಾರೆ, ಹೀಗಾಗಿ ನಾನು ಹೇಳಿದ್ದೇನೆ, ರೈತರಿಗೆ ಅನ್ಯಾಯ ಆಗಿದೆ, ಅದಕ್ಕೆ ಯಾರು ಹೊಣೆ? ಎಂದರು.
Hubli News Latest Kannada News