ನೂತನ ಸಚಿವ ಸಂಪುಟದಲ್ಲಿ ಧಾರವಾಡ ಜಿಲ್ಲೆಗೆ ಒಂದು ಸಚಿವ ಸ್ಥಾನವನ್ನು ಕಲ್ಪಿಸಿದ್ದು ಅತ್ಯಂತ ಸ್ವಾಗತಾರ್ಹವಾದರೂ ಅತ್ಯಂತ ಅಭಿವೃದ್ಧಿಹೊಂದುತ್ತಿರುವ ಬೆಂಗಳೂರು ನಂತರದ ವಾಣಿಜ್ಯ ಮಹಾನಗರ ವಾಗಿರುವ ಧಾರವಾಡ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನದ ಅವಶ್ಯಕತೆ ಇದ್ದು ಕೂಡಲೇ ಇನ್ನೊಂದು ಸಚಿವ ಸ್ಥಾನ ಕಲ್ಪಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ ರಾಜಕೀಯ ಗುಂಪುಗಾರಿಕೆ ಪ್ರತಿಷ್ಠೆಯನ್ನು ಬದಿಗಿಟ್ಟು ರಾಜ್ಯದಲ್ಲಿಯೇ ಆರ್ಥಿಕ ಮತ್ತು ಔದ್ಯೋಗಿಕ ವಾಗಿ ಹಿಂದುಳಿದಿರುವ ಧಾರವಾಡ ಜಿಲ್ಲೆಗೆ ಇನ್ನೊಂದು ಮಹತ್ವದ ಸಚಿವ ಸ್ಥಾನ ನೀಡಿ ಅಭಿವೃದ್ಧಿಗೆ ಕಾರಣೀಭೂತರಾಗ ಬೇಕೆಂದು ಗಂಗಾಧರ ದೊಡವಾಡ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
