Home / Top News / ಗಾಂಜಾ ಪ್ರಕರಣ: ಪಿಐ ಸೇರಿ ಏಳು ಸಿಬ್ಬಂದಿ ಅಮಾನತು

ಗಾಂಜಾ ಪ್ರಕರಣ: ಪಿಐ ಸೇರಿ ಏಳು ಸಿಬ್ಬಂದಿ ಅಮಾನತು

Spread the love

ಹುಬ್ಬಳ್ಳಿ : ಗಾಂಜಾ ಒಂದರ ಪ್ರಕರಣವನ್ನು ಮುಚ್ಚಿಹಾಕಿದಲ್ಲದೇ, ವಶಪಡಿಸಿಕೊಂಡಿದ್ದ ಒಂದೂವರೆ ಕೆಜಿ ಗಾಂಜಾ ನಾಪತ್ತೆ ಮಾಡಿದ ಆರೋಪದ ಎಪಿಎಂಸಿ- ನವನಗರ ಪ್ರಕರಣದಲ್ಲಿ ಠಾಣೆಯ ಇನ್‌ಸ್ಪೆಕ್ಟರ್ ಸೇರಿ 7 ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಲಾಭೂರಾಮ ಆದೇಶ ಹೊರಡಿಸಿದ್ದಾರೆ.

ಎಪಿಎಂಸಿ – ನವನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ವಿಶ್ವನಾಥ ಚೌಗಲೆ , ಎಎಸ್‌ಐ ಕರಿಯಪ್ಪಗೌಡ ಕಾನ್‌ಸ್ಟೇಬಲ್‌ಗಳಾದ ವಿಕ್ರಮ ಪಾಟೀಲ , ನಾಗರಾಜ , ಶಿವರಾಜಕುಮಾರ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣಿಯ ಮಹಿಳಾ ಕಾನ್‌ಸ್ಟೇಬಲ್ ದಿಲ್ಯಾದ , ಹೊನ್ನಪ್ಪನವರ ಎಂಬುವರೇ ಅಮಾನತಾಗಿದ್ದು, ಗಾಂಜಾ ಮಾರಾಟಗಾರರ ಕುರಿತು ಸಾರ್ವಜನಿಕರೊಬ್ಬರು ಎಪಿಎಂಸಿ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದೂವರೆ ಕಿಲೋ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದೆ ಆರೋಪಿಗಳಿಂದ ಹಣ ಪಡೆದು ಕೈಬಿಟ್ಟಿದ್ದರು. ಆದರೆ ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ . ರಾಮರಾಜನ್ ಅವರಿಗೆ ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿಯವರು ಸಲ್ಲಿಸಿದ ವರದಿ ಆಧಾರದ ಮೇಲೆ ಆಯುಕ್ತರು ಇನ್‌ಸ್ಪೆಕ್ಟರ್ ಸೇರಿ 7 ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]