ಹುಬ್ಬಳ್ಳಿ: ಮಹಾನಗರ ಪಾಲಿಕೆಯ 81 ನೇ ವಾರ್ಡಿನ ಅಭ್ಯರ್ಥಿ ಶ್ರೀಮತಿ ಮಂಜುಳಾ ಶ್ಯಾಮ ಜಾಧವ ಅವರ ಪರ ಕೆ.ಕೆ.ನಗರ, ಮಾರುತಿ ನಗರ, ಸೆಟ್ಲಮೆಂಟ್, ಬೆಸ್ತರ್ ಕಾಲೋನಿ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಯಿತು.
ಅನೇಕ ವರ್ಷಗಳಿಂದ ವಾರ್ಡಿನಲ್ಲಿ ಒಳಚರಂಡಿ, ಗಟಾರು, ಬೀದಿ ದೀಪ ಸಹಿತ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಿಲ್ಲವಾಗಿದ್ದು, ವಾರ್ಡಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಜೀವನ ಮಟ್ಟವನ್ನು ಉನ್ನತೀಕರಿಸುವುದಕ್ಕೆ ಮನೆ ಮಗಳಾದ ತಮಗೆ ಆರ್ಶೀವದಿಸಿದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ವಾರ್ಡಿನಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷಯೊಂದೆ ಪರ್ಯಾಯವಾಗಿದ್ದು, ವಾರ್ಡಿನ ಅಭಿವೃದ್ಧಿ ಬಗೆಗೆ ತಮ್ಮದೇ ಆದ ಯೋಜನೆಗಳಿದ್ದು, ಅನುಷ್ಠಾನಕ್ಕೆ ಮತ ನೀಡಬೇಕಂದರು.
ಪ್ರಚಾರದಲ್ಲಿ ಮುಖಂಡರಾದ ಶ್ಯಾಮ ಜಾಧವ, ಅಶೋಕ ಜಾಧವ, ರವಿ ಜಾಧವ್, ಪರಶುರಾಮ ಕೊರವರ, ಪುಂಡಲೀಕ ಗೋಕಾಕ್, ಸುನಿಲ್ ಜಾಧವ, ಸುರೇಶ ಗಾಯಕವಾಡ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.