ಹುಬ್ಬಳ್ಳಿ : ಯುಪಿಎ ಅವಧಿಯಲ್ಲಿ ಬಿಜೆಪಿ ಜನತೆಯ ಪರವಾಗಿ ಸಂಸತ್ ನಲ್ಲಿ ಹೋರಾಡಿತ್ತು. 2ಜಿ ಹಗರಣ, ಕಲ್ಲಿದ್ದಲು ಹಗರಣಗಳ ಬಗ್ಗೆ ಪ್ರಶ್ನೆ ಮಾಡಿತ್ತು.
ಆದರೆ ಕಾಂಗ್ರೆಸ್ ನವರಿಗೆ ಜನಪರ ಚರ್ಚೆಗೆ ಆಸಕ್ತಿ ಇಲ್ಲ.
ಕಾಂಗ್ರೆಸ್ ನವರಿಗೆ ಚರ್ಚೆ ಬಗ್ಗೆ ಭರವಸೆ ಇಲ್ಲ ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಹೇಳಿದರು.
ನಗರದಲ್ಲಿಂದು ಖಾಸಗಿ ಹೋಟೆಲನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿನಾಕಾರಣ ಸಂಸತ್ ನಲ್ಲಿ ಗದ್ದಲು ಎಬ್ಬಿಸಿತು. ಪೆಗಾಸಿಸ್ ವಿಚಾರದಲ್ಲಿ
ಎಲ್ಲ ರೀತಿಯ ಚರ್ಚೆಗೆ ಸಿದ್ಧ ಎಂದು ಪ್ರಧಾನಿಗಳ ಹೇಳಿದ್ದರು. ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು ಅದಕ್ಕೆ ಕಾಂಗ್ರೆಸ್ ಬೆಲೆ ನೀಡಿಲ್ಲ. ಪೆಗಾಸಿಸ್ ಖರೀದಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಸರ್ಕಾರ ಉತ್ತರ ನೀಡಿದೆ. ಆದರೆ ಉತ್ತರ ಕೇಳಿಸಿಕೊಳ್ಳುವ ವ್ಯವಿಧಾನವೂ ಇಲ್ಲದಂತೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ವರ್ತಿಸುತ್ತಿವೆ ಎಂದು ಅವರು ಹೇಳಿದರು.
ರಾಜಕೀಯ ಲಾಭದ ಲೆಕ್ಕಾಚಾರ ಮೇಲೆ ಕಾಂಗ್ರೆಸ್ ಸಂಸತ್ ನಲ್ಲಿ ಗದ್ದಲ ಎಬ್ಬಿಸಿದೆ. ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಉತ್ತರ ಖಂಡ ಚುನಾವಣೆಯಲ್ಲಿ ಲಾಭ ಆಗುತ್ತದೆ ಎಂದು ಕಾಂಗ್ರೆಸ್ ಲೆಕ್ಕಹಾಕಿದೆ.
ಜನಪರ ಚರ್ಚೆಗಳಿಂದ ಮಾತ್ರ ಜನರ ಮನಮುಟ್ಟಲು ಸಾಧ್ಯ. ಕಚ್ಚಾ ತೈಲ ಬೆಲೆ ಕಡಿಮೆ ಇದೆ, ಪೆಟ್ರೋಲ್, ಡಿಸೇಲ್ ಹೆಚ್ಚಾಗಿದೆ ಅಂತ ಬಿಂಬಿಸಲಾಗುತ್ತಿದೆ.
ಆದರೆ ಇದು ಸುಳ್ಳು ಕಚ್ಚಾ ತೈಲದ ಬೆಲೆ ಪ್ರಸ್ತುತ ಹೆಚ್ಚಾಗಿಯೇ ಇದೆ. ಕೋವಿಡ್ ಹಿನ್ನೆಲೆಯಲ್ಲಿ ದೇಶದ ಅರ್ಥಿಕತೆಗೆ ಪೆಟ್ಟು ಬಿದ್ದಿದೆ ಎಂದರು.
ಹುಬ್ಬಳ್ಳಿ ಧಾರವಾಡದಲ್ಲಿ ಕೌಶಲ್ಯ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ. ಮುಂದಿನ ದಿನದಲ್ಲಿ ಹುಬ್ಬಳ್ಳಿ ಧಾರವಾಡವನ್ನು ಕೌಶಲ್ಯ ಅಭಿವೃದ್ಧಿ ಕ್ಷೇತ್ರದ ಕ್ಯಾಪಿಟಲ್ ರೂಪಿಸಲಾಗುವುದು ಎಂದು ಅವರು ಹೇಳಿದರು.