ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಲಬುರ್ಗಿಯ ಜಿಲ್ಲೆ ಪುಟ್ಟ ಬಾಲಕಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದ್ದಾಳೆ.
ಹೌದು…ಕಲಬುರ್ಗಿ ಜಿಲ್ಲೆಯ ನವೀನ್ ಹಾಗೂ ಸಂಗೀತ ದಂಪತಿಗಳ ಅಚ್ಚುಮೆಚ್ಚಿನ ಮಗಳಾದ ಪ್ರಣೀತಾ ಎನ್‌ಎಮ್.
ಪುಟ್ಟ ಬಾಲಕಿಯಿಂದ ವಿವಿಧ ಭಂಗಿಯ ಆಸನಗಳನ ಯೋಗ ಪ್ರದರ್ಶನ ಮಾಡುತ್ತಾ ಗಮನ ಸೆಳೆಯುತ್ತಿದ್ದಾಳೆ.ಚಿಕ್ಕ ವಯಸ್ಸಲ್ಲಿಯೇ ಯೋಗದಲ್ಲಿ ಈಕೆ ಯೋಗದಲ್ಲಿ ನೈಪುಣ್ಯತೆ ಹೊಂದಿದ್ದಾಳೆ. 4 ವರ್ಷದ ಬಾಲಕಿ ಸದ್ಯ ಕನಸು ಬೇಬಿ ನರ್ಸರಿ ಶಾಲೆಯಲ್ಲಿ ಓದುತ್ತಿದ್ದು ಇವಳ ಯೋಗಾಭ್ಯಾಸದಿಂದ ಎಲ್ಲರೂ ಬೆರಗಾಗಿದ್ದು ಮುಂದಿನ ದಿನಗಳಲ್ಲಿ ಯೋಗದ ಮೂಲಕ ಹಲವಾರು ಸಾಧನೆ ಮಾಡಲಿ ಎಂದು ಕಲಬುರ್ಗಿ ಜನತೆ ಹಾರೈಸಿದ್ದಾರೆ..