ಧಾರವಾಡ : ಈಗಾಗಲೇ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಹೆಸರು ಬೆಳೆ ಬಂದಿದ್ದು, ಪ್ರಸ್ತುತ ಹೆಸರು ಬೆಳೆ ಕಾಟವ ಹಂತದಲ್ಲಿ ಇದೆ. ಈ ಹಿಂದೆ ಹೆಸರು ಖರೀದಿ ಕೇಂದ್ರ ಆರಂಭಿಸುತ್ತೆವೆ ಎಂದು ಹೇಳಿದ ಸರ್ಕಾರ ಇದುವರೆಗೂ ಆರಂಭಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಹೆಸರು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅಗ್ರಹಿಸಿದರು.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡ ಜಿಲ್ಲೆಯಾದ್ಯಂತ ಹೆಚ್ಚು ರೈತರು ಹೆಸರು ಬೆಳೆಯನ್ನು ಬೆಳೆದಿದ್ದಾರೆ. ಆದರೆ ಬಂದ ಬೆಳೆಯನ್ನು ಒಣಗಿಸಲು ರೈತರಿಗೆ ವಾತಾವರಣ ಸಾಥ ನೀಡುತ್ತಿಲ್ಲ. ಹಾಗಾಗಿ ನಾಳೆಯಿಂದಲ್ಲೇ ಹೆಸರು ಖರೀದಿ ಕೇಂದ್ರವನ್ನು ತೆರೆಯುವ ಕಡೆಗೆ ಸರ್ಕಾರ ಒತ್ತು ನೀಡಬೇಕು ಎಂದುರು.
ಜಿಲ್ಲೆಯ ರೈತರಿಗೆ ಯೂರಿಯಾ ಗೊಬ್ಬರದ ಅಭಾವತೆ ಕಾಡುತ್ತಿದೆ. ಅಲ್ಲದೇ ಅಧಿಕಾರಿಗಳ ವರ್ಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೆ ಇನ್ನೂರಾ ಐವತ್ತು ರೂಪಾಯಿ ಇರುವ ಯೂರಿಯಾ ಗೊಬ್ಬರವನ್ನು ಕೆಲವು ಕಡೆಗಳಲ್ಲಿ ನಾನ್ನೂರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಎಲ್ಲ ಸಮಸ್ಯೆಯನ್ನು ಆದಷ್ಟು ಬೇಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಗ್ಗೆ ಹರಿಸಬೇಕು ಎಂದು ಒತ್ತಾಯ ಮಾಡಿದರು.
Hubli News Latest Kannada News