ಹುಬ್ಬಳ್ಳಿ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸಮೀಪದಲ್ಲಿನ ಸೇತುವೆ ಮೇಲೆ ಬರುತ್ತಿದ್ದ ನಾಲ್ಕು ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಳೆದ ದಿನ ತಡ ಸಂಜೆ ಈ ದುರ್ಘಟನೆ ನಡೆದಿದೆ. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಜಾನುವಾರುಗಳು ಮನೆಯ ಕಡೆ ಬರುತ್ತಿದ್ದವು. ಆದರೆ ಸೇತುವೆ ಮೇಲಿನ ನೀರಿನ ರಭಸದ ನಡುವೆಯೂ ಎಂಟಕ್ಕೂ ಹೆಚ್ಚು ಹಸುಗಳು ಸೇತುವೆ ದಾಟಲು ಪ್ರಯತ್ನಿಸಿವೆ. ಆದರೆ ಅದರಲ್ಲಿ ನಾಲ್ಕು ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅಲ್ಲದೆ ಸುಮಾರು ಹೊತ್ತಿನವರೆಗೆ ಜಾನುವಾರುಗಳು ತಮ್ಮ ಜೀವ ಉಳಿಸಿಕೊಳ್ಳಲು ಪರದಾಡಿದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಜಾನುವಾರುಗಳು ಕಂಬಾರಗಣವಿ ಗ್ರಾಮದ ರೈತರದ್ದೆಂದು ಗೊತ್ತಾಗಿದ್ದು, ನೀರಿನಲ್ಲಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆಂದು ತಿಳಿದು ಬಂದಿದೆ.