ಹುಬ್ಬಳ್ಳಿ;ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾಡ೯ ನಂ 61 (73)ರ ಹಳೇ ಹುಬ್ಬಳ್ಳಿಯ ಪ್ರದೇಶದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದಮಠರವರ ಅಧ್ಯಕ್ಷತೆಯಲ್ಲಿ ಹಾಗೂ ಮಹೇಶ ಲಖಾಜನವರವರ ನೇತ್ರತ್ವದಲ್ಲಿ ಹು ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸ್ಯಾನಿಟೈಜನ್ನು ಸಿಂಪಡಿಸಲಾಯಿತು .
ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಪವಾರ್ ಮಾತನಾಡಿ, ಮಹಾಮಾರಿ ಕೋವೀಡ್ ನಿರ್ವಹಣೆಯಲ್ಲಿ ಎಲ್ಲರೂ ಸಹರಿಸಬೇಕು. ಇಂದು ಅತ್ಯಂತ ಕಷ್ಟದ ಕಾಲ ಸ್ವಚ್ಛತೆಗೆ ಪ್ರತಿಯೊಬ್ಬರು ಕೈಜೋಡಸೋಣಾ ಎಲ್ಲವೂ ಸರಕಾರ ಮಾಡಲಿ ಅಂದರೆ ಸರಿಯಲ್ಲ ಎಂದರು.
ಶ್ರೀಮತಿ ಪೂಜಾ ರಾಯ್ಕರ್, ಶ್ರೀಮತಿ ಪ್ರೀತಿ ಲಕಾಜನವರ ,ಮಂಜುನಾಥ ಲಖಾಜನವರ , ಸಂಜು ಬುಗಡಿ , ಫಕೀರಪ್ಪ ಕಂಠಿ , ಬಿಜೆಪಿ ಪದಾಧಿಕಾರಿಗಳು ,ಕಾಯ೯ಕತ೯ರು ಉಪಸ್ಥಿತರಿದ್ದರು
