ಧಾರವಾಡ : ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ ಬೋನಿ (ಕೇಜ್)ಗೆ ನಿನ್ನೆ ತಡ ರಾತ್ರಿ ಚಿರತೆ ಸಿಕ್ಕಿಬಿದಿದ್ದು, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಚಿರತೆ ವಾಸವಾಗಿತ್ತು. ಗ್ರಾಮದ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದು, ಅದು ಎತ್ತರವಾಗಿ, ದಟ್ಟವಾಗಿ ಬೆಳೆದಿದ್ದರಿಂದ ಚಿರತೆ ಅಡಗಿಕೊಳ್ಳಲು ಸಹಾಯಕವಾಗಿತ್ತು.
ಅರಣ್ಯ ಇಲಾಖೆಯ ಡಿಎಪ್ಓ ನೇತೃತ್ವದಲ್ಲಿ ಸುಮಾರು 60 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಚಿರತೆ ಕಾರ್ಯಾಚರಣೆಯನ್ನು ನಿರಂತರವಾಗಿ ಮತ್ತು ತೀವ್ರವಾಗಿ ಮಾಡುತ್ತಿದ್ದರು.
ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳ ಮಧ್ಯ ಹಾಗೂ ಸುತ್ತಲೂ ಸುಮಾರು 6 ಕ್ಕೂ ಹೆಚ್ಚು ಬೋನಗಳನ್ನು ಮೌಂಸದೊಂದಿಗೆ ಇಟ್ಟಿದ್ದರು.
ಬಹುಶಃ ನಿನ್ನ ತಡ ರಾತ್ರಿ ಅಥವಾ ಬೆಳಗಿನ ಜಾವ ಚಿರತೆ ಬೋನಿನಲ್ಲಿರುವ ಮೌಂಸ ತಿನ್ನಲು ಬಂದು ಸಿಕ್ಕಿ ಹಾಕಿ ಕೊಂಡಿದೆ. ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದೆ.
ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಡಿಎಪ್ಓ ಯಶಪಾಲ ನೇತೃತ್ವದ ಎಲ್ಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿನಂದಿಸಿದ್ದಾರೆ.
Hubli News Latest Kannada News