ಹುಬ್ಬಳ್ಳಿ : ಪ್ರಾಧಾನಿಯವರನ್ನು ಎಲ್ಲರೂ ಭೇಟಿಯಾಗಬಹುದು. ಈಗ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಿಯೋಗ ಪ್ರಧಾನಿ ಭೇಟಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅವರು ಪ್ರಧಾನಿಯವರನ್ನು ಭೇಟಿ ಮಾಡುವುದ್ದಾರೆ ಹೋಗಿ ಭೇಟಿಯಾಗಲಿ, ಅಲ್ಲದೆ ಜಾತಿಗಣತಿ ಸದ್ಯ ಈಗ ನ್ಯಾಯಾಲಯದಲ್ಲಿದೆ. ವಿಪಕ್ಷ ನಿಯೋಗ ಪ್ರಧಾನಿ ಭೇಟಿ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಹೇಳಿದರು.
ಹುಬ್ಬಳ್ಳಿಯ ತಮ್ಮ ನಿವಾಸದ ಎದುರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿ ಧಾರವಾಡದಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದೆ. ಹಾಗಾಗಿ ಈಗ ಇಲ್ಲಿ ಕೋಡ್ ಆಪ್ ಕಂಡೆಕ್ಟ್ ಜಾರಿಯಲ್ಲಿದೆ. ಆದರಿಂದ ಹೆಚ್ಚಾಗಿ ಇಲ್ಲಿ ಏನೂ ಮಾತಾನಾಡುವುದಕ್ಕೆ ಬರುವುದಿಲ್ಲ ಎಂದರು.
ಗುಂಡು ಹಾಕಿದರು ಗಣೇಶ ಚತುರ್ಥಿ ಮಾಡುತ್ತಿವೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುದ ಮುಖ್ಯಮಂತ್ರಿಗಳು, ಅವರ ಬಗ್ಗೆ ನಾನೇನು ಹೇಳುವುದಿಲ್ಲವೆಂದು ತೆರಳಿದರು.
*ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ*
ಹುಬ್ಬಳ್ಳಿಯ ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ ಕಳೆಗಟ್ಟಿತ್ತು. ಬಸವರಾಜ ಬೊಮ್ಮಾಯಿಗೆ ಸಹೋದರಿಯರು ರಾಕಿ ಕಟ್ಟಿದ್ದು, ಬಳಿಕ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಹೋದರಿಯರು ಕೂಡಾ ಸಿಎಂ ನಿವಾಸಕ್ಕೆ ಆಗಮಿಸಿ ರಾಖಿ ಕಟ್ಟಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವಿಕರಿಸಿದರು.