ಹುಬ್ಬಳ್ಳಿ: ಮಹಾನಗರ ಪಾಲಿಕೆಯ 82 ನೇ ವಾರ್ಡಿನ ಸೋನಿಯಾಗಾಂಧಿ ನಗರ, ಬಿಡನಾಳ, ಬಿ.ಡಿ.ಕಾರ್ಮಿಕರ ನಗರ, ಹೇಮರೆಡ್ಡಿ ಮಲ್ಲಮ್ಮ ಕಾಲೋನಿ, ಅಡವಿ ಪ್ಲಾಟ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಪಕ್ಷೇತರ ಅಭ್ಯರ್ಥಿ ಅಕ್ಷತಾ ಮೋಹನ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಯಿತು.
ಇಂದು ಓಣಿಯ ಹಿರಿಯರು, ತಾಯಂದಿರು, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರೊಂದಿಗೆ ಪ್ರಚಾರ ನಡೆಸಿದರು. ಈ ವೇಳೆ ಮುಖಂಡರಾದ ಮೋಹನ ಅಸುಂಡಿ ಮಾತನಾಡಿ, ವಾರ್ಡಿನ ನಿವಾಸಿಯಾದ ತಮಗೆ ಇಲ್ಲಿನ ವಾಸ್ತವದ ಅರಿವಿದ್ದು, ಸರ್ವಾಂಗೀಣ ಅಭಿವೃದ್ಧಿಗಾಗಿ, ದಿಟ್ಟ, ಸ್ವಚ್ಛ ಪ್ರಗತಿಶೀಲ ಆಡಳಿತಕ್ಕಾಗಿ ಟ್ರ್ಯಾಕ್ಟರ್ ಗುರುತಿಗೆ ಮತ ಹಾಕುವ ಮೂಲಕ ವಾರ್ಡಿನ ಅಭಿವೃದ್ಧಿಗೆ ಸಹಕರಿಸಲು ವಿನಂತಿಸಿದರು.
ಅಸುಂಡಿ ಮನೆತನ ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದೆ. ಈ ಬಾರಿ ವಾರ್ಡ್ ನಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಎಲ್ಲ ಸಮೂದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮನೆ ಮಗಳ ಗೆಲುವು ನಿಶ್ಚಿತವಾಗಿದೆ ಎಂದು ಮತಯಾಚನೆ ವೇಳೆ ಸುರೇಶ ಅಸುಂಡಿ, ಶರೀಫ್ ನದಾಫ್, ರುದ್ರಪ್ಪ ಸೋರಟೂರು, ಗುರುಸಿದ್ದಪ್ಪ ಭದ್ರಾಪುರ, ಬಸವರಾಜ ಕೊಪ್ಪದ ಜನತೆಗೆ ಮನವರಿಕೆ ಮಾಡಿದರು.