ಮೈಸೂರು ಅತ್ಯಾಚಾರ ಪ್ರಕರಣ ತನಿಖೆ ಹಂತದಲ್ಲಿದೆ ಬಹಿರಂಗ ಚರ್ಚೆ ಬೇಡ- ಶಾಸಕ ಅರವಿಂದ ಬೆಲ್ಲದ
ಧಾರವಾಡ : ಮೈಸೂರು ಅತ್ಯಾಚಾರ ಪ್ರಕರಣವನ್ನು ಈಗಾಗಲೇ ಪೊಲೀಸ್ ಅದಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳ ತನಿಖಾ ಹಂತದಲ್ಲಿ ಇರುವುದರಿಂದ ಬಹಿರಂಗವಾಗಿ ಚರ್ಚೆ ಮಾಡಲು ಬರುವುದಿಲ್ಲ. ಈಗಾಗಲೇ ಗೃಹ ಮಂತ್ರಿಗಳು ರೇಪ್ ಪ್ರಕರಣ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೋ ಒಂದು ಕಡೆಗಳಲ್ಲಿ ತಪ್ಪುಗಳು ನಡೆಯುತ್ತವೆ. ಆದರೆ ಅದನ್ನೇ ಇಟ್ಟಕೊಂಡು ಗೃಹ ಮಂತ್ರಿಗ ತಲೆಗೆ ಎಲ್ಲವನ್ನೂ ಕಟ್ಟುವುದು ಸರಿಯಲ್ಲ. ಗೃಹ ಖಾತೆಯು ಹೆಚ್ಚು ಲೋಡ್, ಸೆನ್ಸ್ಟಿವ್ ಇರುವಂತಹ ಇಲಾಖೆಯಾಗಿದೆ ಎಂದು ಗೃಹ ಸಚಿವರ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಇತ್ತೀಚೆಗೆ ಗೃಹಸಚಿವರು ಖಾತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇಲಾಖೆಯ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಸಮಯ ಅವಾಕಾಶ ಬೇಕಾಗುತ್ತದೆ. ಸಚಿವರು ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ಈಗಾಗಲೇ ಗೃಹ ಇಲಾಖೆಯ ಮೇಲೆ ಸಚಿವರಿಗೆ ಹಿಡಿತ ಸಿಕ್ಕುದೆ. ಇನ್ನೂ ಸ್ವಲ್ಪ ಹಿಡಿತಬೇಕಾಗಿದೆ. ಅದನ್ನು ಆದಷ್ಟು ಬೇಗ ತೆಗೆದುಕೊಳ್ಳುತ್ತಾರೆ ಎಂದುರು.