Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ.

ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ.

Spread the love

ಹುಬ್ಬಳ್ಳಿ :ಯರಿಕೋಪ್ಪದಲ್ಲಿನ ” ಬಿಗ್ ಮಿಶ್ರಾ ಕೆಫೆ ” ನಲ್ಲಿ ಗ್ರಾಹಕರಿಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ.

ಸಿಹಿ ತಿನಿಸು, ನಮಕೀನ ಮತ್ತು ಬೇಕರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ‘ಬಿಗ್ ಮಿಶ್ರಾ ಪೇಡೆ’ಯೂ  ಕಳೆದ ಅಕ್ಟೋಬರನಲ್ಲಿ ಹೋಟೆಲ್ ಉದ್ಯಮಕ್ಕೆ ಎಂಟ್ರಿ ಕೊಟ್ಟು  ಹುಬ್ಬಳ್ಳಿ ಧಾರವಾಡ ಬೈ ಪಾಸನಲ್ಲಿ ಟೋಲ ಪ್ಲಾಝಾ ಬಳಿ ಯರಿಕೊಪ್ಪನಲ್ಲಿ 10 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ “ಬಿಗ್ ಮಿಶ್ರಾ” ದ ಸುಸಜ್ಜಿತ ಮತ್ತು ಶುಚಿಯಾದ ಸಸ್ಯಾಹಾರಿ ಊಟ ಮತ್ತು ಉಪಹಾರ ಗೃಹವನ್ನು ಆರಂಭಿಸಿತು.
ಬೈ ಪಾಸನಲ್ಲಿ ಸಂಚರಿಸುವ ಪ್ರಯಾಣಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಬಿಗ್ ಮಿಶ್ರಾ ಕೆಫೆಗೆ ಸಿಕ್ಕ ಗ್ರಾಹಕರ ಉತ್ತಮ ಸ್ಪಂದನೆಯನ್ನು  ಗಮನಿಸಿ ” ಬಿಗ್ ಮಿಶ್ರಾ ಕೆಫೆ”ಯಲ್ಲಿ ಮತ್ತಷ್ಟು ಹೊಸ ಸೇವೆಗಳನ್ನು ಪರಿಚಯಿಸಲಾಗುತ್ತಿದೆ.

ಬಿಗ್ ಮಿಶ್ರಾ ಕೆಫೆ ಯಲ್ಲಿ ಎಲ್ಲ ಸಿಹಿ ಮತ್ತು ನಮಕೀನ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಯೊಂದಿಗೆ   ದಕ್ಷಿಣ ಭಾರತೀಯ, ಉತ್ತರ ಭಾರತೀಯ ಊಟ ಹಾಗೂ ಉಪಹಾರಗಳು ಈಗಾಗಲೇ ಇಲ್ಲಿ ಗ್ರಾಹಕರಿಗೆ ಲಭ್ಯವಿವೆ. ಮತ್ತು ಇದೇ 25 ಮೇ ರಿಂದ  ವಿಶೇಷವಾದ ಸ್ವಾದಿಷ್ಟ “ರಾಜಸ್ತಾನಿ ಥಾಲಿ” ಹಾಗೂ ಉತ್ತರ ಕರ್ನಾಟಕದ ರುಚಿಕರ “ಜೋಳದ ರೊಟ್ಟಿ ಥಾಲಿ”ಗಳನ್ನು ಗ್ರಾಹಕರ ಸೇವೆಗಾಗಿ ಆರಂಭಿಸಲಿದ್ದೇವೆ. ಅಲ್ಲದೆ ಬೆಳಿಗ್ಗೆ 7 ಘಂಟೆಯಿಂದ 11 ಘಂಟೆಯ ವರೆಗೆ ಅನೇಕ ಬಗೆಯ ಪರಾಠಾಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆರಂಭಿಸುತ್ತಿದ್ದೇವೆ.
ಇಲ್ಲಿ “ಬಿಗ್ ಮಿಶ್ರಾ ಪೇಡೆ”ಯನ್ನು ಗ್ರಾಹಕರ ಎದುರಿನಲ್ಲಿಯೇ ತಯಾರಿಸುವ ‘ಲೈವ್ ಪೇಡಾ ಸೆಂಟರ ಇದ್ದು ಗ್ರಾಹಕರ ಎದುರಿನಲ್ಲಿ ತಾಜಾ ಪೇಡೆಗಳನ್ನು ತಯಾರಿಸಿ ಕೊಡಲಾಗುತ್ತಿದ್ದು ಗ್ರಾಹಕರು ಇದರ ರುಚಿಯನ್ನು  ಸವಿಯುತ್ತಿದ್ದಾರೆ. ಇವುಗಳ ಜೊತೆಗೆ ಇಲ್ಲಿನ ಬೇಕರಿ ವಿಭಾಗದಲ್ಲಿ ವಿವಿಧ ಬಗೆಯ ಕುಕಿ ಹಾಗೂ ಕೇಕಗಳು ಸಹ ದೊರೆಯುತ್ತಿವೆ.
ಚಾಟ ಸೆಂಟರನಲ್ಲಿ 20ಕ್ಕೂ ಹೆಚ್ಚು ವಿವಿಧ ಬಗೆಯ ಚಾಟಗಳು, ಜ್ಯೂಸ್ ಸೆಂಟರನಲ್ಲಿ ತಾಜಾ ಹಣ್ಣಿನ ರಸಗಳು, ಮತ್ತು ಆಯಿಸ ಕ್ರೀಂ ಸೆಂಟರನಲ್ಲಿ ವಿವಿಧ ಬಗೆಯ ಆಯಿಸ ಕ್ರೀಂ ಗ್ರಾಹಕರ  ಮನವನ್ನು ತಣಿಸುತ್ತಿದ್ದು  “ಬಿಗ್ ಮಿಶ್ರಾ ಕೆಫೆ ”
ಬೆಳಗಾವಿ, ಗೋವಾ ಭಾಗದಿಂದ ಬೆಂಗಳೂರು ಹಾಗೂ ಬೆಂಗಳೂರು ಭಾಗದಿಂದ ಮುಂಬಯಿ, ಪುಣೆ, ಗೋವಾ ಭಾಗಕ್ಕೆ ಪ್ರಯಾಣಿಸುವ ಪ್ರವಾಸಿಗರ ನೆಚ್ಚಿನ ಆಯ್ಕೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸುವುದಕ್ಕೆ ಬಿಗ್ ಮಿಶ್ರಾ ಆಡಳಿತ ವರ್ಗ ಕಟ್ಟಿಬದ್ಧವಾಗಿದೆ.
ಎಂದು ಬಿಗ್ ಮಿಶ್ರಾ ಪೇಡೆಯ ಶ್ರೀಧರ
ಬೋರಕರರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶ್ರೀಧರ ಶೆಟ್ಟಿ, ಹಾಗೂ ಯೋಗೇಶ ಜೈನ ಅವರು ಉಪಸ್ಥಿತರಿದ್ದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]