Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಧಾರವಾಡ ಜಿಲ್ಲೆಯ 210 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಧಾರವಾಡ ಜಿಲ್ಲೆಯ 210 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

Spread the love

ಧಾರವಾಡ : ಬಿಎಸ್‌ಎಸ್ ಸೊನಾಟ ಮೈಕ್ರೋ ಕ್ರೆಡಿಟ್ ಲಿ. ಸಂಸ್ಥೆ ಇಂದು ಇಲ್ಲಿನ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಧಾರವಾಢ ಜಿಲ್ಲೆಯ ಸುಮಾರು 210 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಹುಬ್ಬಳ್ಳಿ ಬರೋಡ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಗಡದವರ ಮಾತನಾಡಿ  ಬಿಎಸ್‌ಎಸ್ ಸೊನಾಟ ಮೈಕ್ರೋ ಕ್ರೆಡಿಟ್ ಸಂಸ್ಥೆಯು ಸಿಎಸ್‌ ಆರ್ ಅಡಿಯಲ್ಲಿ ತನ್ನ ಆದಾಯದ ಶೇ. ೨ ರಷ್ಟನ್ನು ಸಮಾಜಮುಖಿ ಕಾರ್ಯಗಳಿಗೆ ಅದರಲ್ಲೂ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಿ ವಿದ್ಯಾರ್ಥಿ ವೇತನವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಂಡು, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮದೇ ಗುರುತನ್ನು ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ಅತಿಥಿಗಳಾದ ಕುಮಾರ್ ಕೆ ಎಫ್. ಅವರು, ನೀಡಲಾಗಿರುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಓದಿನ ಜೊತೆಗೆ ಕ್ರಿಯೇಟಿವ್ ಮೈಂಡ್ ಇರಬೇಕು. ಈ ರೀತಿಯ ಉತ್ತಮ ಅವಕಾಶ ಕಲ್ಪಿಸಿದ ಬಿಎಸ್‌ಎಸ್ ಸೊನಾಟ ಮೈಕ್ರೋಕ್ರೆಡಿಟ್ ʼಲಿʼ. ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಅವರು ಧನ್ಯವಾದ ಸಲ್ಲಿಸಿದರು.

ಮತ್ತೊಬ್ಬ ಅತಿಥಿ ತಿಮ್ಮರಾಯಸ್ವಾಮಿ ಮಾತನಾಡಿ ಮಹಿಳೆಯರು ಅವಶ್ಯಕತೆಗೆ ತಕ್ಕಷ್ಟು ಸಾಲ ಪಡೆದು ಮರುಪಾವತಿ ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯ ಮಾತ್ರವಲ್ಲದೆ  ಶಾಲಾ ಅಭಿವೃದ್ಧಿ ಕಾರ್ಯಕ್ರಮಗಳು, ಪ್ರವಾಹ ಸಂತ್ರಸ್ಥರಿಗೆ  ಅಹಾರ ಕಿಟ್‌ ವಿತರಣೆ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಪೀಠೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳಾದ ಐಎಎಸ್/ಐಪಿಎಸ್‌ ಗುರಿ ಹೊಂದಲು ಸಲಹೆ ನೀಡಿದರು.

ಪಂಡಿತ್‌ ಗಂಗಾಧರ ಪಾಟಿಲ್ (ಸಿಎಸ್‌ ಆರ್‌ ಮುಖ್ಯಸ್ಥ)  ಪ್ರಶಾಂತ್‌ ಕುಮಾರ್‌ .ಎ (ಸಿಎಸ್‌ ಆರ್‌ ಸಹಾಯಕ ವ್ಯವಸ್ಥಾಪಕ), ರಮೇಶ್‌ ಕೆ.ಪಿ .ಹರೀಶ್, ನಾಗರಾಜ್, ಹೇಮಂತ್‌ ಗೌಡ  ಇನ್ನಿತರರು ಭಾಗವಹಿಸಿದ್ದರು.

ಸಂಸ್ಥೆ ಈ ವರ್ಷ ರಾಜ್ಯದ  15 ಜಿಲ್ಲೆಗಳಲ್ಲಿ 3000 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದೆ.

About Editor 2

Check Also

ಉದ್ದಿಮೆದಾರರು ಸುರೇಶ ಮಾನಶೆಟ್ಟರ ಹಾಗೂ ಗಿರೀಶ ಮಾನಶೆಟ್ಟರ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]