ಹುಬ್ಬಳ್ಳಿ ಧಾರವಾಡ ಮಹಾನಗರವು ರಾಜ್ಯದ ರಾಜಧಾನಿ ಬೆಂಗಳೂರು ನಂತರದ ಅತ್ಯಂತ ದೊಡ್ಡ ನಗರವಾಗಿದ್ದು ಜನಸಂಖ್ಯೆ ಭೌಗೋಳಿಕ ಕೈಗಾರಿಕಾ ವಸಾಹತು ವಾಹನದಟ್ಟಣೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರ ಖ್ಯಾತಿಯ ಮಹಾನಗರವಾಗಿದೆ ಸನ್ 20/21 ಸಾಲಿನಲ್ಲಿ ಮಹಾನಗರದ ಪಾಲಿಕೆಗೆ 82 ವಾರ್ಡ್ ಗಳನ್ನು ರಚಿಸಲಾಗಿದೆ.ಈ ಹಿಂದೆ 67 ವಾರ್ಡಗಳು ಇದ್ದಾಗ ವಲಯ ಕಚೇರಿ ಗಳ ಸಂಖ್ಯೆ 11 ಇತ್ತು ಈಗ 82 ವಾರ್ಡ್ಗಳಾಗಿದ್ದರಿಂದ ಮಹಾನಗರಪಾಲಿಕೆಯ ವಲಯ ಕಚೇರಿಗಳನ್ನು ಹೆಚ್ಚಿಸಲು ಆಯುಕ್ತರು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ ಈಗಿರುವ ವಲಯ ಕಚೇರಿಗಳ ಕೆಲಸಕಾರ್ಯಗಳು ಸಾರ್ವಜನಿಕರಿಗೆ ಸಂತೃಪ್ತಿಯನ್ನು ತಂದುಕೊಟ್ಟಿರುವುದಿಲ್ಲ ಮತ್ತು ವಲಯ ಕಚೇರಿಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಕೆಲಸದ ಒತ್ತಡವಿರುವುದರಿಂದ ಸಕಾಲಕ್ಕೆ ನಾಗರಿಕರ ಸಮಸ್ಯೆಗಳು ನಿವಾರಣೆಯಾಗುತ್ತಿಲ್ಲ ಮಹಾನಗರಪಾಲಿಕೆಗೆ ಸಂಬಂಧಿಸಿದ ಎಲ್ಲ ಕೆಲಸ ಕಾರ್ಯಗಳು ವಲಯಕಚೇರಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಬ್ಬಂದಿ ಕೊರತೆ ಕೆಲಸದ ಒತ್ತಡ ಮುಂತಾದ ಸಮಸ್ಯೆಗಳಿಂದ ಜನರ ಅಲೆದಾಟ ನೋಡಲಾಗುತ್ತಿಲ್ಲ ವೆಂದೂ ಗಂಗಾಧರ ದೊಡವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
