ಇಂದು ಕುಂದಗೋಳದಲ್ಲಿ ಶ್ರೀ ಬಸವಣ್ಣಜ್ಜನವರ ಸಭಾಭವನದಲ್ಲಿ ನಡೆದ ಎಸ್ಸಿ ಎಸ್ಟಿ ಸಮಾಜದ ಕಾರ್ಯಾಗಾರದಲ್ಲಿ ಶಾಸಕರು ಭಾಗವಹಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಹಿಂದಿನ ನಮ್ಮ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದ ಸಮಗ್ರ ಶಿಕ್ಷಣ ಆರೋಗ್ಯ ವ್ಯಾಪಾರ ಸ್ವಾವಲಂಬನೆಯ ಬದುಕಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಕುರಿತು ಮಾಹಿತಿ ನೀಡಲಾಗುತ್ತದೆ.
ಯುವ ಜನರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿ, ಉದ್ಯಮಶೀಲತೆಯ ಅಭಿವೃದ್ಧಿ, ಹಿರಿಯ ನಾಗರಿಕರ ಹರೈಕೆ ಮತ್ತು ನೆರವು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ವಯಂ ಉದ್ಯೋಗ ತರಬೇತಿ, ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕೃಷಿ ತೋಟಗಾರಿಕೆ ಪಶು ಸಂಗೋಪನೆ ರೇಷ್ಮೆ ಸಹಕಾರ ಇಲಾಖೆ ಹೀಗೆ ಇಲಾಖೆಗಳ ಮೂಲಕ ಸೌಲಭ್ಯಗಳನ್ನು ಒದಗಿಸಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಭಿನವ ಶ್ರೀ ಬಸವಣ್ಣಜ್ಜನರು ಕಲ್ಯಾಣಪುರ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಿರಿಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದಾರೆ.