ಕುಂದಗೋಳ: ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವಾಗ ನಿಮಗೆ ನೀಡಿದ ಆಶ್ವಾಸನೆ ಈಡೇರಿಸುವ ಸಂಕಲ್ಪದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ತಾವು ಬೆಂಬಲಿಸಬೇಕೆಂದು ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ತಿಳಿಸಿದರು.
ಅವರು ಕ್ಷೇತ್ರದ ಪಶುಪತಿಹಾಳ, ಯರೇಬೂದಿಹಾಳ, ಹೊಸಳ್ಳಿ, ಹಿರೇಗುಂಜಳ, ಚಿಕ್ಕಗುಂಜಳ, ಬಾಗವಾಡ, ಬರದ್ವಾಡದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಗೈದ ಅವರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ಕ್ಷೇತ್ರದಲ್ಲಿ ಪಕ್ಷಭೇದ ಮಾಡದೇ ಅಭಿವೃದ್ದಿ ಮಾಡುತ್ತಿದ್ದು, ಕ್ಷೇತ್ರದ ಮತದಾರರು ಆರ್ಶಿವಾದದಿಂದ ಜನಪರ ಕಾಯಕ ಮಾಡುತ್ತಿದ್ದೇನೆ. ಇದಕ್ಕೆ ಮತ್ತಷ್ಟು ವೇಗ ನೀಡಲು ನಿಮ್ಮ ಆರ್ಶಿವಾದ ಇದ್ದರೆ ಸಾಕು. ಕೊಟ್ಟ ಮಾತು ಇಟ್ಟ ಗುರಿಗೆ ಎಂದು ತಪ್ಪುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾಗನಗೌಡ ಪಾಟೀಲ್ ಶ್ರೀ ಶಿವಲಿಂಗಪ್ಪ ವಡಕಣ್ಣವರ ಶ್ರೀ ಈರನಗೌಡ ಪಾಟೀಲ್ ಶ್ರೀ ಶಿವಾನಂದ ಮಲ್ಲಪೂರ ಎನ್ ಎನ್ ಪಾಟೀಲ್ ಮಾಲತೇಶ್ ಶಾಗೋಟಿ ಪ್ರಕಾಶ್ ಗೌಡ ಪಾಟೀಲ್ ಮುಂತಾದವರು ಇದ್ದರು