ಹುಬ್ಬಳ್ಳಿ : ರಾಜಯೋಗ ಚಿತ್ರ ಬರುವ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಧರ್ಮಣ್ಣ ಕಡೂರು ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ಯಾಮಿಲಿ ಮನರಂಜನೆ ರಾಜಯೋಗ ಚಿತ್ರವಾಗಿದ್ದು. ಚಿತ್ರದ ನಾಯಕಿಯಾಗಿ ನಿರೀಕ್ಷಾರಾವ್ ನಟಿಸಿದ್ದು. ಚಿತ್ರದ ಕಥೆ , ಚಿತ್ರಕಥೆ, ಸಹಿತ್ಯೆ, ಸಂಭಾಷಣೆ , ನಿರ್ದೇಶನವನ್ನು ಲಿಂಗರಾಜ ಉಚ್ಛಂಗಿದುರ್ಗ , ಚಿತ್ರದ ನಿರ್ಮಾಣವನ್ನು ಬಿ.ಆರ್ ಕುಮಾರ ಕಂಠೀರವ ಅವರು ಮಾಡಿದ್ದು. ಚಿತ್ರದಲ್ಲಿ 6 ಹಾಡುಗಳು ಇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರೀಕ್ಷಾರಾವ್ , ಅವಿನಾಶ , ನಿರ್ಮಾಪಕರು ಬಿ.ಆರ್ ಕುಮಾರ ಕಂಠೀರವ ಉಪಸ್ಥಿತರಿದ್ದರು.