ಕುಂದಗೋಳ : ತಾಲೂಕಿನ ಚಿಕ್ಕಗುಂಜಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿಕ್ಕಗುಂಜಳ ಗ್ರಾಮದ ಬಸನಗೌಡ ಮಂಜುನಾಥಗೌಡ ನೆಗಳೂರ ಎಂಬ ಯುವಕ ಡಾ: ಬಿ ಆರ್ ಅಂಬೇಡ್ಕರ್ ಅವರ ಕುರಿತು ಇರುವ ಪೋಸ್ಟ್ ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿ ಗ್ರಾಮದಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಯುವಕನ ಮೇಲೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹೌದು! ಸಾಮಾಜಿಕ ಜಾಲತಾಣದ ಇನ್ ಸ್ಟಾಗ್ರಾಂನಲ್ಲಿ. ಡಾ: ಬಿ ಆರ್ ಅಂಬೇಡ್ಕರ್ ಅವರ ಕುರಿತು ಇರುವ ಪೋಸ್ಟ್ ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿರುವ ಯುವಕನನ್ನು ಕೂಡಲೇ ಬಂಧಿಸಿ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಉಡಚಪ್ಪ ಸಣ್ಣ ನಿಂಗಪ್ಪ ಪರಸಣ್ಣವರ ಅವರು ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗುಡಗೇರಿ ಠಾಣೆ ಪಿಎಸ್ಐ ಆದ ನವೀನ್ ಜಕ್ಕಲಿ ಅವರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Hubli News Latest Kannada News