ಕುಂದಗೋಳ: ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆಯ ಮೇರೆಗೆ ಸಿಎಸ್ಆರ್ ಯೋಜನೆಯ ಅಡಿ ಅಂದಾಜು ಮೊತ್ತ 15 ಲಕ್ಷ ರುಪಾಯಿ ವೆಚ್ಚದಲ್ಲಿ ಕುಂದಗೋಳ ಕ್ಷೇತ್ರದ ರಾಮನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಶಾಲಾ ಕೊಠಡಿ ಮಂಜುರಾಗಿದ್ದು ಇಂದು ಶಾಸಕರಾದ ಶ್ರೀ ಎಮ್ ಆರ್ ಪಾಟೀಲ ಸರ್ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗುರುಹಿರಿಯರು, ಶಾಲಾ ಶಿಕ್ಷಕ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.