ಕುಂದಗೋಳ
ಹೌದು ಹೀಗೊಂದು ವಿಶಿಷ್ಟ ರೀತಿಯ ಆಚರಣೆಯನ್ನು ಕುಂದಗೋಳ ತಾಲ್ಲೂಕಿನ ಯರೇಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಲಾಯಿತು
ಶ್ರೀ ಸಹೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಶಾಲಾ ಮಕ್ಕಳ ಸಹೋದರರ ಭಾವನೆ ಬೆಳೆಸುವುದು ಹಾಗೂ ಇದರ ಜೊತೆಗೆ ಸೋದರತ್ವಭಾವದ ಮಹತ್ವವನ್ನು ತಿಳಿಸುವುದರ ಜೊತೆಗೆ ಪವಿತ್ರ ರಕ್ಷಾಬಂಧನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಅರಮನಿ ಗುರುಗಳು ವಹಿಸಿದ್ದರು, ಮುಖ್ಯ ಅತಿಥಿ ಸ್ಥಾನವನ್ನು ಪಿ ವಿ ಪೂಜಾರ ನಿವೃತ್ತ ಮುಖ್ಯೋಪಾಧ್ಯಾಯರು ಎಂ ಪಿ ಎಸ್ ಯರೇಬೂದಿಹಾಳ ವಹಿಸಿದ್ದರು, ಹಾಗೂ ಶಾಲಾ ಶಿಕ್ಷಕರು ಅಂಗನವಾಡಿ ಶಿಕ್ಷಕರು ಮತ್ತು ಊರಿನ ನಾಗರೀಕರ ಸಹಭಾಗಿತ್ವದಲ್ಲಿ ಆಚರಿಸಲಾಯಿತು.