ಮಾನ್ಯ ಮುಖ್ಯಮಂತ್ರಿಗಳಿಗೆ, ಕರ್ನಾಟಕ ರಾಜ್ಯ ಸರ್ಕಾರ ತಂದಿರುವ ಐದು ಭಾಗ್ಯಗಳು ಮಧ್ಯಮ ವರ್ಗ ಮತ್ತು ಬಡ ಜನರಿಗೆ ಈ ಬೆಲೆ ಏರಿಕೆ ಸಮಯದಲ್ಲಿ, ಅಮೃತದಂತಹ ಕೆಲಸ ಮಾಡಿದೆ.
ಈ ರೀತಿ ರಾಜ್ಯ ಸರ್ಕಾರವು ಪತ್ರಕರ್ತರಿಗೆ ಮಾಸಿಕ ಪಿಂಚಣಿ ಕೊಡಬೇಕು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮಾ ಸೌಲಭ್ಯ ಮತ್ತು ಉಚಿತ ಶಿಕ್ಷಣವನ್ನು ಅವರು ಮಕ್ಕಳಿಗೆ ಕೊಡಬೇಕು ಎಂದು ನಾನು ವಿನಂತಿಸುತ್ತೇನೆ ನಮ್ಮ ಹಳ್ಳಿಗಳ ಪತ್ರಕರ್ತರಿಗೆ ಬರುವ ಆದಾಯವು ಬಹಳ ಕಡಿಮೆಯಾಗುತ್ತದೆ. ಅವರಿಗೆ ಜೀವನ ನಿರ್ವಹಿಸುವುದು ಕೂಡ ಬಹಳ ಕಷ್ಟದ ಸಂಗತಿಗಳು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಮತ್ತು ಸಮಾಜಮುಖಿ ಕೆಲಸ ಮಾಡುವ ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯಿಸಿ ಒಳ್ಳೆ ನಾಯಕರನ್ನು ಪರಿಚಯಿಸುವ ಕೆಲಸ ಮಾಡುವ ಅಧಿಕಾರಿಗಳು ಯಾವುದಾದರೂ ಕಾಮಗಾರಿಗಳನ್ನು ಕಳಪೆಯಾಗಿ ಮಾಡಿ ಅದನ್ನು ನಿರ್ಭಯವಾಗಿ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ ಇಂಥ ಪತ್ರಕರ್ತರಿಗೆ ಸರ್ಕಾರ ನಾನು ಕೇಳುತ್ತಿರುವ ಎಲ್ಲಾ ಸೌಕರ್ಯಗಳನ್ನು ಕೊಡಬೇಕಾಗಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅವರಿಗೆ ಉಚಿತ ಬಸ್ ಪಾಸ್ ನೀಡಬೇಕು.
ಪತ್ರಕರ್ತರಿಗೆ ಪ್ರತಿ ತಾಲ್ಲೂಕಿಗೆ ಒಂದು ಪತ್ರಕರ್ತರ ಭವನವನ್ನು ನಿರ್ಮಿಸಿಕೊಡಬೇಕು ಎಂದು ಮಂಜುನಾಥ್ ಎನ್ ಎಂಟ್ರುವಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವರು ಉಪತಹಸೀಲ್ದಾರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕರೇಶ್ ಕಟಗಿ ಭರತ್ ಕಟಗಿ ಸಚಿನ್ ಡಿಪಿ ಶಿವ ಪೂಜಾರ್ ಉಪಸ್ಥಿತರಿದ್ದರು