ಕುಂದಗೋಳ
ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ ಇವರು ಕುಂದಗೋಳ ತಾಲೂಕಿನ ಕೂಬಿಹಾಳ, ಇಂಗಳಗಿ ಮತ್ತು ಮಳಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸ್ಮಶಾನ ಅಭಿವೃದ್ಧಿ, ಕೆರೆಗೆ ಗೇಟ್ ವಾಲ್, ಶಾಲಾ ಆಟದ ಮೈದಾನ, ಶಾಲಾ ಕಾಂಪೌಂಡ್ ವಾಲ್ , ಮಲ ತಾಜ್ಯ ನಿರ್ವಹಣಾ ಘಟಕ, ಜಲಜೀವನ ಮಿಷನ್ ಹಾಗೂ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ , ಡಾ ಮಹೇಶ್ ಕುರಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಕುಂದಗೋಳ, ತಾಂತ್ರಿಕ ಸಂಯೋಜಕರಾದ ಶಿವಾನಂದ್ ಚಂತಕಲ್ , ಪಿಡಿಒ ನಾಗರಾಜ್ ಉಳೀಸುರ, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.