ಕುಂದಗೋಳ
ಭೂಮಿ ಮೇಲೆ ಇರುವ ಸಕಲ ಜೀವರಾಶಿಗಳಿಗೆ ನೀರು ಅತ್ಯಮೂಲ್ಯವಾಗಿದೆ,ನಾವು ನೀವೆಲ್ಲರೂ ಸೇರಿ ನೀರನ್ನು ಮಿತವಾಗಿ ಬಳಸಬೇಕು.
ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೇನಾದರೂ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆಗುವ ಸಾಧ್ಯತೆ ಇದ್ದರೆ ಮೊದಲೇ ನಮಗೆ ತಿಳಿಸಿರಿ. ನಮ್ಮ ಗಮನಕ್ಕೆ ಬಾರದೇ ಕುಡಿಯುವ ನೀರಿಗೆ ತೊಂದರೆ ಆದಲ್ಲಿ ಅದಕ್ಕೆ ಆಯಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅವರೆ ಹೊಣೆಗಾರರು ಆಗುತ್ತಾರೆ ಎಂದು ಶಾಸಕ ಎಂ ಆರ್ ಪಾಟೀಲ್ ಅವರು ಹೇಳಿದರು.
ಅವರು ಸೋಮವಾರದಂದು ಪಟ್ಟಣದ ತಾಲ್ಲೂಕು ಪಂಚಾಯತ ನಲ್ಲಿ ಶಾಸಕ ಎಂ ಆರ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ. ತಾಲ್ಲೂಕಿನ ಮಲಪ್ರಭಾ ನದಿ ಕುಡಿಯುವ ನೀರು ಸರಬರಾಜು ಬಹುಗ್ರಾಮ ಯೋಜನೆಯಡಿ, ಯರಗುಪ್ಪಿ, ಚಾಕಲಬ್ಬಿ, ಯರಿನಾರಾಯಣಪೂರ, ಹಿರೇನೆರ್ತಿ, ಭರದ್ವಾಡ, ರೊಟ್ಟಿಗವಾಡ, ಗುಡೇನಕಟ್ಟಿ, ಮುಳ್ಳೊಳ್ಳಿ, ಹೀಗೆ ಒಟ್ಟು 14 ಹಳ್ಳಿಗಳಿಗೆ ಮಲಪ್ರಭಾ ನದಿಯ ನೀರಿನ ಸರಬರಾಜು ಬಂದಾಗಿರುವುದರಿಂದ ಈ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಹಳ ಹೆಚ್ಚಾಗಿದ್ದು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಆ ಗ್ರಾಮಗಳಿಗೆ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸುವಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾ ವಹಿಸಬೇಕು ಹಾಗೂ ಈ ಗ್ರಾಮಗಳಿಗೆ ನೀರಿನ ಸಮಸ್ಯೆ ಆಗಬಾರದೆಂದು ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಧಾರವಾಡ ಜಿಲ್ಲಾ ಅಧಿಕಾರಿಗಳಿಗೆ ಪೋನ್ ಕರೆ ಮೂಲಕ ಸೂಚನೆ ನೀಡಿ ಆ ಗ್ರಾಮಗಳಿಗೆ ನೀರಿನ ತೊಂದರೆ ಆಗದಂತೆ ನಿಗಾ ವಹಿಸಿ ನೀರು ಸರಬರಾಜು ಮಾಡಿಸಿ ಎಂದು ಆದೇಶಿಸಿದ್ದು. ಹಾಗೂ ವಿದ್ಯುತ್ ಅನ್ನು ಸರಿಯಾಗಿ ಬಳಸಿದವರಿಗೆ ವಿಶೇಷವಾಗಿ ಸನ್ಮಾನಿಸಿ ಬಹುಮಾನ ಕೊಡುತ್ತೇನೆಂದು ಶಾಸಕ ಎಂ ಆರ ಪಾಟೀಲ ಹೇಳಿದರು.