ಕುಂದಗೋಳ ಮತಕ್ಷೇತ್ರದ ಛಬ್ಬಿ – ಮಿಶ್ರಕೋಟಿಯಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಂತರ ಗ್ರಾಮದ ಜಲಧಾರೆ ಯೋಜನೆಯ ಅಡಿಯಲ್ಲಿ ನೀರಿನ ಸಂಗ್ರಹಣೆ (ನೀರಿನ ಟ್ಯಾಂಕ್) ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ನಂತರ ಗ್ರಾಮದ ವಿವೇಕ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡವನ್ನು ವೀಕ್ಷಿಸಲಾಯಿತು. ಬೊಮ್ಮಸಮುದ್ರ ಗ್ರಾಮದ ಹತ್ತಿರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾಮಗಾರಿಯ ಪರಿಶೀಲನೆಯನ್ನು ಮಾಡಿ ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮದ ಹಿರಿಯರು, ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

Hubli News Latest Kannada News