ಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ಹುಬ್ಬಳ್ಳಿ ನಿವಾಸಿ ಲಕ್ಷ್ಮಣ ಆರ್.ರೋಖಾ ಅವರನ್ನು ಜೆಡಿಎಸ್ ಮಾಧ್ಯಮ ಸಂಯೋಜಕ ಶ್ರೀ ಕಂಠೆಗೌಡ ರಾಜ್ಯ ವಕ್ತಾರನ್ನಾಗಿ ಮಾಡಿದ್ದರು. ನಂತರ ಸಿಎಂ ಇಬ್ರಾಹಿಂ ಅವರು ಮಾಹಿತಿ ಪಡೆದು, ಆತನನ್ನು ಕೂಡಲೇ ರಾಜ್ಯ ವಕ್ತಾರ ಆಗಿರುವ ಆದೇಶ ಪತ್ರವನ್ನು ರದ್ದು ಮಾಡುವಂತೆ ಸೂಚನೆ ಮೇರೆಗೆ, ಶ್ರೀಕಂಠೆಗೌಡ ರಾಜ್ಯ ವಕ್ತಾರ ನೇಮಕವನ್ನು ರದ್ದು ಪಡಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಲಕ್ಷ್ಮಣ ಆರ್.ರೋಖಾ ಟೇಸ್ಟಿಂಗ್ ಫೌಡರ್ ಹಾಗೂ ಇತರ ಫೌಂಡೇಶನ್ ಹೆಸರು ಹೇಳಿ ಹಣ ವಸೂಲಿ ಮಾಡಿರುವ ಆರೋಪ ಸಹ ಕಂಡು ಬಂದಿದ್ದು, ಪಕ್ಷದ ಘನತೆ ಗೌರವ ಕಾಪಾಡಲು ಕೂಡಲೆ ಲಕ್ಷ್ಮಣ ರೋಖಾ ಆದೇಶವನ್ನು ರದ್ದು ಪಡಿಸಿ ಆದೇಶವನ್ನು ಹೊರಡಿಸಿದ್ದಾರೆ.
