ಹುಬ್ಬಳ್ಳಿ: ಬೆಂಗಳೂರು ಬಿಟ್ಟರೆ ಹು-ಧಾ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಈ ದಿಸೆಯಲ್ಲಿ ನಗರಕ್ಕೆ ಬರುವ ಜನರ ಆತಿಥ್ಯ ನೀಡುವ ಮತ್ತು ನಗರದ ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ಸೇವೆ ನೀಡುವ ಉದ್ದೇಶದಿಂದ ಕ್ಯೂಬಿಕ್ಸ್ ಹೊಟೆಲ್ ಎಲ್ಲ ರೀತಿಯಲ್ಲಿ ಸಿದ್ದಗೊಂಡಿದೆ ಎಂದು ಕ್ಯೂಬಿಕ್ಸ್ ಮುಖ್ಯಸ್ಥ ವೆಂಕಟೇಶ ಕಬಾಡಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಪ್ರಶಸ್ತವಾದ ತಾಣದಲ್ಲಿ ಐಸ್‍ಕ್ಯೂಬ್ ಎಂಬ ಶಿರೋನಾಮೆಯಡಿ ಅತ್ಯಾಧುನಿಕ ಹೋಟೆಲ್ ನ್ನು ಮೊದಲು ಪ್ರಾರಂಭ ಮಾಡಲಾಯಿತು. ಇದರಲ್ಲಿ 5 ಶೈಲಿಯ ಖಾದ್ಯಗಳಾದ ಇಂಡಿಯನ್, ಕಾಂಟಿನೆಂಟಲ್, ಚೈನಿಸ್, ತಂದೂರಿ ಹಾಗೂ ಪೇಸ್ಟ್ರಿ ವಿಭಾಗ ಒಳಗೊಂಡ ಫ್ಯಾಮಿಲಿ ಫೈನ್‍ಡೈನ ರೆಸ್ಟೋರೆಂಟ್ ಹಾಗೂ ಲಾಂಜ್ ಬಾರ್ ವಿಭಾಗ ಸಹಿತ ಪರಿವಾರ ಸಮೇತ ಆನಂದಿಸಬಹುದಾದ ವಾತಾವರಣ ಈ ಹೋಟೆಲ್ ಹೊಂದಿದೆ.
ಈ ಯಶಸ್ವಿ ಉದ್ಯಮದಿಂದ ಪ್ರೆರೇಪಿತಗೊಂಡು 2020ರಲ್ಲಿ ಕ್ಯೂಬಿಕ್ಸ್ ಹೊಟೆಲ್ ಪ್ರಾರಂಭ ಮಾಡಲಾಗಿದೆ ಎಂದರು.
ಕ್ಷಿಪ್ರವಾಗಿ ಬೆಳೆಯುತ್ತಿರುವ ಮಹಾನಗರದ ಬೇಡಿಕೆಗೆ ಅನುಕೂಲವಾಗುವಂತೆ ‘ಕ್ಯೂಬಿಕ್ಸ್’ ಎಂಬ ಆದರ-ಆತಿಥ್ಯ ಉದ್ದೇಶದ ಸಭೆ, ಸಮಾರಂಭ, ಕಾರ್ಪೊರೇಟ್ ಇವೇಂಟ್ಸ್ ಇತ್ಯಾದಿ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ಬಿಜಿನೆಸ್ ಹೋಟೆಲ್ ಪ್ರಾರಂಭಿಸಲಾಗಿದೆ. ಇದರಲ್ಲಿ 1000 ಆಸನ ಸಾಮರ್ಥ್ಯದ 3 ತರಹದ ಹವಾನಿಯಂತ್ರಿತ ಕಾನ್ಪರೆನ್ಸ್ ಹಾಲ್, 45 ಎಸಿ ಗೆಸ್ಟ್‍ರೂಮ್, ವಿಶಾಲ ಹುಲ್ಲುಹಾಸಿನ ತೆರೆದ ಜಾಗೆ, ವಿಪುಲವಾದ ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಮುಂತಾದ ಸೌಲಭ್ಯ ಹೊಂದಿದ್ದು ಜನತೆ ಹೊಟೆಲ್ ಸೇವೆಯನ್ನು ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ ಬುರುಬುರೆ ಇದ್ದರು.