ಹುಬ್ಬಳ್ಳಿ : ಭಾರತದ ಅತ್ಯಂತ ಪ್ರತಿಷ್ಠಿತ ಹಾಗೂ ಪರಂಪರಾಶಿಕ ಆಭರಣ ಸಂಸ್ಥೆಗಳಲ್ಲಿ ಒಂದಾದ ‘ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್’, ತನ್ನ 155 ವರ್ಷಗಳ ಸುದೀರ್ಘ ಕರಕುಶಲತೆಯ ಪರಂಪರೆಯನ್ನು ಹುಬ್ಬಳ್ಳಿಯ ಜನತೆಗೆ ಪರಿಚಯಿಸಲು ಭವ್ಯ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಈ ವಿಶೇಷ ಪ್ರದರ್ಶನವು ಅಕ್ಟೋಬರ್ 16 ರಿಂದ 19 ರವರೆಗೆ ನಗರದ ‘ಹೋಟೆಲ್ ದಿ ಫರ್ನ್ ರೆಸಿಡೆನ್ಸಿ’ಯಲ್ಲಿ ನಡೆಯಲಿದೆ.
ಈ ಅಪರೂಪದ ಪ್ರದರ್ಶನ ಮೇಳಕ್ಕೆ ಲೋಕಸಭಾ ಸದಸ್ಯ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟರ್ ಅವರು ದೀಪ ಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಗದೀಶ್ ಶೆಟ್ಟರ್ ಹಾಗೂ ಶ್ರೀಮತಿ ಶಿಲ್ಪಾ ಶೆಟ್ಟರ್, “ಇಂತಹ ಶ್ರೀಮಂತ ಇತಿಹಾಸ ಮತ್ತು ವಿಶ್ವಾಸನೀಯತೆ ಹೊಂದಿರುವ ಪ್ರಸಿದ್ಧ ಬ್ರ್ಯಾಂಡ್ ಹುಬ್ಬಳ್ಳಿಗೆ ತನ್ನ ವಿಶಿಷ್ಟ ಕಲಾತ್ಮಕತೆಯನ್ನು ತಂದಿರುವುದು ಸಂತೋಷದ ವಿಷಯ. ಇಲ್ಲಿನ ಪ್ರತಿಯೊಂದು ವಿನ್ಯಾಸವು ಕೇವಲ ಆಭರಣವಾಗಿರದೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬುವಂತಿದೆ. ಹುಬ್ಬಳ್ಳಿಯ ಜನತೆ ಈ ಕರಕುಶಲತೆಯನ್ನು ಖಂಡಿತವಾಗಿಯೂ ಮೆಚ್ಚಲಿದ್ದಾರೆ” ಎಂದು ಶ್ಲಾಘಿಸಿದರು.
ಪ್ರದರ್ಶನದ ಪ್ರಮುಖ ಆಕರ್ಷಣೆಗಳು:
* ವೈವಿಧ್ಯಮಯ ಸಂಗ್ರಹ: ಶುದ್ಧ ಚಿನ್ನ, ಅಪರೂಪದ ರತ್ನಗಳು, ಪ್ರಕಾಶಮಾನವಾದ ಮುತ್ತುಗಳು, ಭವ್ಯವಾದ ಅಮೆಥಿಸ್ಟ್, ರಾಜಮನೆತನದ ಪಚ್ಚೆ, ಮಾಣಿಕ್ಯ, ವೈಡೂರ್ಯ, ಸಿಟ್ರಿನ್ ಹಾಗೂ ಅತ್ಯಾಕರ್ಷಕ ವಜ್ರದ ಅಭರಣಗಳು ಇಲ್ಲಿ ಲಭ್ಯವಿವೆ. * ‘crash.club’ ಸಂಗ್ರಹ: ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ನೈತಿಕ ಐಷಾರಾಮಿತನಕ್ಕೆ ಒತ್ತು ನೀಡುವ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ವಜ್ರಗಳ ಕ್ರಾಂತಿಕಾರಿ ಸಂಗ್ರಹವನ್ನು ಈ ಬಾರಿ ಪರಿಚಯಿಸಲಾಗಿದೆ.
* ವಿಶೇಷ ಕೊಡುಗೆಗಳು: ಪ್ರದರ್ಶನದ ಅಂಗವಾಗಿ ಬೆಳ್ಳಿ ಆಭರಣಗಳ ಮೇಲೆ 2%, ಚಿನ್ನದ ಆಭರಣಗಳ ಮೇಲೆ 4% ಹಾಗೂ ವಜ್ರದ ಆಭರಣಗಳ ಮೇಲೆ 6% ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.
“ಹುಬ್ಬಳ್ಳಿಯ ಗ್ರಾಹಕರಿಂದ ನಮಗೆ ಯಾವಾಗಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಸಾಂಪ್ರದಾಯಿಕ ಪರಂಪರೆ ಹಾಗೂ ಆಧುನಿಕ ವಿನ್ಯಾಸಗಳನ್ನು ಇಲ್ಲಿನ ಜನರಿಗೆ ತಲುಪಿಸುವುದೇ ನಮ್ಮ ಮುಖ್ಯ ಉದ್ದೇಶ,” ಎಂದು ಸಂಸ್ಥೆಯ ಮಳಿಗೆ ಮುಖ್ಯಸ್ಥ ಸುಮನ್ ಮೈಟಿ ತಿಳಿಸಿದರು.
ಪಿಆರ್ ಮುಖ್ಯಸ್ಥ ತೇಜಸ್ ಕಲ್ರಾ ಮಾತನಾಡಿ, “ಇದು ಕೇವಲ ಆಭರಣ ಮಾರಾಟವಲ್ಲ, 155 ವರ್ಷಗಳ ಪರಂಪರೆ ಮತ್ತು ಭವಿಷ್ಯದ ಶೈಲಿಯ ಸಮ್ಮಿಲನ,” ಎಂದರು.
ಆಭರಣ ಆಸಕ್ತರು ಹಾಗೂ ಗ್ರಾಹಕರು ಈ ವಿಶೇಷ ಪ್ರದರ್ಶನದ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮಳಿಗೆ ಮುಖ್ಯಸ್ಥ ಸುಮನ್ ಮೈಟಿ (ಮೊಬೈಲ್ ಸಂಖ್ಯೆ: +91 +91 99459 01869) ಅವರನ್ನು ಸಂಪರ್ಕಿಸಬಹುದು.
Hubli News Latest Kannada News