ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸಲಿದೆ . ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣ ಶರಣಾಗಿದ್ದಾನೆ . ಎಸ್ ಐ ಟಿ ಯವರು ಕಟ್ಟಿಬದ್ಧವಾಗಿ ತನಿಖೆ ಮಾಡಬೇಕು. ಪ್ರಕರಣದಲ್ಲಿನ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿಯೇ ತನಿಖೆ ನಡೆಯಬೇಕೆಂಬುದು ರಾಜ್ಯದ ಜನರ ಇಚ್ಛೆಯಾಗಿದೆ ಎಂದರು.
ಪ್ರಜ್ವಲ್ ಪ್ರಕರಣ ರಾಜಕೀಯ ಪ್ರೇರಿತ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,
ಪ್ರಕರಣ ಯಾವ ರೀತಿ ಬೆಳಕಿಗೆ ಬಂದಿತು . ಯಾರು ಫೆನ್ ಡ್ರೈವ್ ಹಂಚಿಕೆ ಮಾಡಿದರು, ಯಾಕೆ ಮಾಡಿದರು . ಇದೆಲ್ಲವನ್ನು ನೋಡಿದಾಗ ಇದರಲ್ಲಿ ರಾಜಕಾರಣ ಬೆರೆತಿರೋದು ಸ್ಪಷ್ಟ . ಘಟನೆಯ ಸಂತ್ರಸ್ತರಿಗೆ ನ್ಯಾಯ ಕೊಡುವುದು ಒಂದು ಭಾಗ.
ಇಂತಹ ವಿಚಾರಗಳನ್ನು ಪ್ರಚಾರ ಮಾಡದು ಕಾನೂನು ವಿರುದ್ಧ ಆ ಮಗ್ಗಲಿನಲ್ಲಿಯೂ ಎಸ್ ಐ ಟಿ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು ಎಂದರು.