ಹುಬ್ಬಳ್ಳಿ: ಇಂದು ಆಧುನಿಕತೆಯ ನಡುವೆ ನಮ್ಮ ಭಾರತೀಯ ಸಂಸ್ಕೃತಿ ಕಣ್ಮರೆಯಾಗುತ್ತಿರುವ ದಿನಗಳಲ್ಲಿ ಇಲ್ಲೊಂದು ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ವೇದಿಕ್ ಸಂಪ್ರದಾಯದಲ್ಲಿ ಶಪತ್ ಮಾಡಿಸಿ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿಯ ತಿಳುವಳಿಕೆ ನೀಡುವ ಜತೆಗೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ.
ಹೌದು, ಕೂಷ್ಮಾ ಎಜ್ಯುಕೇಶನ್ ಸೊಸೈಟಿಯೇ ಈ ಕೆಲಸಕ್ಕೆ ಮುಂದಾಗಿದ್ದು, ನಗರದ ತಿಮ್ಮಸಾಗರದಲ್ಲಿನ ಹೊಸ ಕೋರ್ಟ್ ಹತ್ತಿರ ಕಳೆದ 2022 ಸೆಪ್ಟೆಂಬರ್ ತಿಂಗಳಿಂದ ಆರಂಭಗೊಂಡಿರುವ ಈ ಶಿಕ್ಷಣ ಸಂಸ್ಥೆ, 2023 ರಿಂದ ತನ್ನ ಮೊದಲ ಬ್ಯಾಚ್ ಆರಂಭಿಸಿದೆ.
ಈಗಾಗಲೇ ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಿ ಹೆಸರುಗಳಿರುವ ಸಂಜೀವಿನಿ ಆಸ್ಪತ್ರೆ ಇದೀಗ ಕೂಷ್ಮಾ ಎಜ್ಯುಕೇಶನ್ ಸೊಸೈಟಿ ಮೂಲಕ ನರ್ಸಿಂಗ್ ಶಿಕ್ಷಣ ನೀಡಲು ಮುಂದಾಗಿದೆ.
ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಆರಂಭಗೊಂಡಿರುವ ಈ ನರ್ಸಿಂಗ್ ಕಾಲೇಜು, ಡಾ.ಅಭಿಷೇಕ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ.
ಕಾಲೇಜು ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, 100 ಬೆಡ್ ಆಸ್ಪತ್ರೆ, ನೂರಿತ ಶಿಕ್ಷಕರು ಹೀಗೆ ಹತ್ತಾರು ವೈಶಿಷ್ಯತೆಯನ್ನು ಕೂಷ್ಮಾ ಎಜ್ಯುಕೇಶನ್ ಸೊಸೈಟಿ ಹೊಂದಿದೆ.
ಇಂದು ತನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ನರ್ಸಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸುವ ಹಂತದಲ್ಲಿ ಪ್ರಾಚಾರ್ಯ ವಿರೇಶ ತೊಪಲಕಟ್ಟಿ ಅವರ ನೇತೃತ್ವದಲ್ಲಿ ಭಾರತೀಯ ವೇದಿಕ್ ಸಂಪ್ರದಾಯದಲ್ಲಿ ಲ್ಯಾಂಪ್ ಲೈಟಿಂಗ್ ಆ್ಯಂಡ್ ಓಥ್ ಟೆಕಿಂಗ್ ಸೆರೆಮನಿಯನ್ನು ನಡೆಸಿ ವಿದ್ಯಾರ್ಥಿಗಳಿಂದ ಶಪತ್ ಮಾಡಿಸಿದೆ. ಈ ಮೂಲಕ ಆಧುನಿಕತೆಗೆ ಮಾರುಹೋಗುವ ಜನರಿಗೆ ನಮ್ಮ ಸಂಪ್ರದಾಯ ತಿಳಿಸುವ ಕೆಲಸ ಮಾಡಿದೆ.