ಹುಬ್ಬಳ್ಳಿ: ದೇಶ ಕಾಯುವ ಯೋದರು ಸಾಕಷ್ಟು ವರ್ಷದಿಂದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರುಶುರಾಮ್ ದಿವಾನದ ಅವರ ದೇಶ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ನಿನ್ನೆಯ ದಿನ ಬೆಂಗಳೂರಿನಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಯೋದರಾದ ಪರಶುರಾಮ್ ದಿವಾನದ ಅವರಿಗೆ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2023-24ನೇ ಸಾಲಿನ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಪರಶುರಾಮ್ ದಿವಾನದ ಅವರಿಗೆ ನಿನ್ನೆಯ ದಿನ ಜವಾಹರ ಬಾಲಭವನ ಸೊಸೈಟಿ ಕಬ್ಬನ್ ಉದ್ಯಾನವನ ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದರು.