Home / ರಾಜಕೀಯ / ರಾಜು ನಾಯಕವಾಡಿ ಯವರನ್ನು ಭೇಟಿ ಮಾಡಿದ NCP ರಾಜ್ಯಾಧ್ಯಕ್ಷ : ತೀವ್ರ ಕುತೂಹಲ ಕೆರಳಿಸಿದೆ NCP ನಾಯಕರ ಭೇಟಿ

ರಾಜು ನಾಯಕವಾಡಿ ಯವರನ್ನು ಭೇಟಿ ಮಾಡಿದ NCP ರಾಜ್ಯಾಧ್ಯಕ್ಷ : ತೀವ್ರ ಕುತೂಹಲ ಕೆರಳಿಸಿದೆ NCP ನಾಯಕರ ಭೇಟಿ

Spread the love

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಈಗಾಗಲೇ ಸಾಕಷ್ಟು ಜನಪರ ಹೋರಾಟಗಳನ್ನು ಮಾಡಿಕೊಂಡು ಸಾರ್ವಜನಿಕರ ಧ್ವನಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ರಾಜು ನಾಯಕವಾಡಿ.ಎಸ್ ಎಸ್ ಕೆ ಸಮಾಜದ ಯುವ ಮುಖಂಡರು ಅವಳಿ ನಗರದ ಸಮಸ್ಯೆಗಳಿಗೆ ಮತ್ತು ಯಾರೇ ಯಾವುದೇ ಸಮಸ್ಯೆಗಳನ್ನು ಹೊತ್ತುಕೊಂಡು ಬಂದರೆ ಅವರ ಧ್ವನಿಯಾಗಿ ಹಗಲಿರುಳು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ರಾಜು ನಾಯಕವಾಡಿ ಅವರು ಉತ್ಸಾಹಿ ಯುವ ಮುಖಂಡರಾಗಿದ್ದಾರೆ.ಇತ್ತೀಚಿಗಷ್ಟೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿರುವ ರಾಜು ನಾಯಕವಾಡಿ ಯವರು ಸಧ್ಯ ಲೋಕಸಭಾ ಸ್ಪರ್ಧೆಯ ಪ್ಲಾನ್ ಮಾಡುತ್ತಿದ್ದಾರೆ.ಅಧಿಕಾರ ಇರಲಿ ಇಲ್ಲದಿರಲಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಒಡಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ರಾಜು ನಾಯಕವಾಡಿ ಅವರನ್ನು ರಾಷ್ಟ್ರೀಯ ಪಕ್ಷದ ನಾಯಕರು ಭೇಟಿ ಮಾಡಿದ್ದಾರೆ.ಹೌದು ಲೋಕಸಭಾ ಚುನಾವಣೆಯ ಸ್ಪರ್ಧೆಯ ತಯಾರಿಯಲ್ಲಿದ್ದ ರಾಜು ನಾಯಕವಾಡಿ ಯವರ ಕೆಲಸ ಕಾರ್ಯಗಳನ್ನು ವರ್ಚಸ್ಸನ್ನ ನೋಡಿಕೊಂಡು ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಟೀಮ್ ಭೇಟಿ ಮಾಡಿದರು.ಹುಬ್ಬಳ್ಳಿಗೆ ಆಗಮಿಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ ಎಸ್ ಇನಾಮದಾರ ನೇತ್ರತ್ವದಲ್ಲಿನ ಟೀಮ್ ಎರಡು ಗಂಟೆಗಳ ಕಾಲ ರಾಜು ನಾಯಕವಾಡಿ ಅವರೊಂದಿಗೆ ಸಭೆಯನ್ನು ಮಾಡಿದರು.ನಗರದ ಹೊಟೇಲ್ ವೊಂದರಲ್ಲಿ ಎರಡು ಗಂಟೆಗಳ ಕಾಲ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿ ಯುವ ಮುಖಂಡ ರಾಜು ನಾಯಕವಾಡಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಮಂತ್ರಣವನ್ನು ನೀಡಿದರು ಇದರೊಂದಿಗೆ ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ಕುರಿತಂತೆಯೂ ಕೂಡಾ ಚರ್ಚೆಯನ್ನು ಮಾಡಿದರು.ಎಸ್ ಸಿಪಿ ನಾಯಕರ ಸಂಪೂರ್ಣವಾದ ಮಾತುಕತೆಗಳಿಗೆ ರಾಜು ನಾಯಕವಾಡಿ ಕೂಡಾ ಕೆಲವೊಂದಿಷ್ಟ ಷರತ್ತುಗಳನ್ನು ಮುಂದಿಟ್ಟಿದ್ದು ಎಸ್ ಸಿಪಿ ಪಕ್ಷಕ್ಕೆ ಆಮಂತ್ರಣವನ್ನು ನೀಡಿದ್ದು ಸ್ಥಳೀಯ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಚರ್ಚೆಯನ್ನು ಮಾಡಿ ಪಕ್ಷದ ರಾಷ್ಠ್ರೀಯ ಅಧ್ಯಕ್ಷ ಶರದ್ ಪವಾರ್ ಸಮ್ಮುಖದಲ್ಲಿಯೇ ಪೈನಲ್ ಚರ್ಚೆಯನ್ನು ಮಾಡಿ ಸೆರ್ಪಡೆಯಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಸ್ಪರ್ಧೆಯನ್ನು ಮಾಡಿ ವಿಜಯದ ಪತಾಕೆಯನ್ನು ಹಾರಿಸೋದಾಗಿ ರಾಜು ನಾಯಕವಾಡಿ ಹೇಳಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]