ಕುಂದಗೋಳ: ಕಳೆಗುಂದಿರುವ ಸರ್ಕಾರಿ ಶಾಲೆಗಳ ಗೋಡೆಗಳಿಗೆ ಹೊಸ ಕಳೆ ತುಂಬಲು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮಕ್ಕೆ ಇಂದು ಕುಂದಗೋಳ ಮತಕ್ಷೇತ್ರದ ರಾಮನಕೊಪ್ಪ ಗ್ರಾಮದಲ್ಲಿ ಶಾಸಕರಾದ ಶ್ರೀ ಎಮ್ ಆರ್ ಪಾಟೀಲ ಸರ್ ಚಾಲನೆ ನೀಡಿದರು.
ನಮ್ಮ ಸರಕಾರಿ ಶಾಲೆಗಳು ಯಾವುದೇ ರೀತಿ ಸುಣ್ಣ ಬಣ್ಣ ಕಳೆದುಕೊಂಡು ಕಳೆಗುಂದಬಾರದು ಅವುಗಳಿಗೆ ಹೊಸ ಮೆರಗು ಕೊಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಕೈಗೊಂಡ ಈ ನಡೆಗೆ ಅವರಿಗೆ ಕೃತಜ್ಞತೆಗಳನ್ನು ಶಾಸಕರು ಸಲ್ಲಿಸಿದರು.
ನಂತರ ಅಂಜುಮನ್ ಸಂಸ್ಥೆಯಿಂದ ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಕಾರಣೀಭೂತರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.