Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ರಾ ಹೇ ಬಳಿ ೨ಸಾವಿರ ಎಕರೆ ಭೂಮಿ ಸ್ವಾಹಕ್ಕೆ ಹುನ್ನಾರ ಕೇಂದ್ರ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ : ಮಾಜಿ ಶಾಸಕ ಚಿಕ್ಕನಗೌಡ್ರ

ರಾ ಹೇ ಬಳಿ ೨ಸಾವಿರ ಎಕರೆ ಭೂಮಿ ಸ್ವಾಹಕ್ಕೆ ಹುನ್ನಾರ ಕೇಂದ್ರ ಸಚಿವರ ಮೇಲೆ ಗಂಭೀರ ಆರೋಪ ಮಾಡಿದ : ಮಾಜಿ ಶಾಸಕ ಚಿಕ್ಕನಗೌಡ್ರ

Spread the love

ಕುಂದಗೋಳ : ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಒಟ್ಟು ಏಳು ಗ್ರಾಮಗಳ ಸುಮಾರು ಎರಡು ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದು ಈ ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ರೈತರೊಟ್ಟಿಗೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಎಚ್ಚರಿಕೆ ನೀಡಿದರು.

ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ, ನೂಲ್ವಿ,ಶರೇವಾಡ ಕೊಟಗೊಂಡಹುಣಸಿ ಸಹಿತ ಹಲವು ಗ್ರಾಮಗಳ ಸರಹದ್ದಿನ ಒಟ್ಟು ೨ ಸಾವೀರ ಎಕರೆ ಭೂಮಿಯನ್ನು ಕಳೆದ ಅವಧಿಯಲ್ಲಿದ್ದ ಬಿಜೆಪಿ ಸರಕಾರ ೧೭-೧೦-೨೦೨೨ ಆದೇಶ ಹೊರಡಿಸಿ ಫಲವತ್ತಾದ ಭೂಮಿ ಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಆಗಿನ‌ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಕೈಗಾರಿಕಾ ಉದ್ದೇಶಕ್ಕಾಗಿ ಕೇವಲ ೧೫ ಲಕ್ಷ ರೂ, ನಿಗಧಿಗೊಳಿಸಿ ಸ್ವಾಧೀನ ಪಡಿಸಿಕೊಳ್ಳಲು ಆದೇಶ ಹೊರಡಿಸಿದ್ದಾರೆ. ಇಗಾಗಲೇ ಇದೇ ಪ್ರದೇಶದ 10 ಎಕರೆ ಕಸಬರಗಿ ( ವಿಭವ ಪ್ಯಾಕ್ಟರಿ) ಇನ್ನೂ ,೧೦ ಎಕರೆ ರತನ್ ಅನ್ನುವವರ ಹೆಸರಲ್ಲಿ ಸ್ವಾಧೀನ ಪಡೆಸಿಕೊಂಡು ವಿವಿಧ ಪ್ಯಾಕ್ಟರಿ ತೆರೆಯಲಾಗಿದ್ದು ಇದಕ್ಕೆ ನಮ್ಮದೇನೂ ಅಬ್ಯಂತರವಿಲ್ಲ. ಆದರೆ ಸದ್ಯಕೇವಲ ೧೫ ಲಕ್ಷ,ರೂ.ಗಳನ್ನು ಭೂಮಿಯ ಬೆಲೆಗೆ ನಿಗಧಿ‌ಮಾಡಲಾಗಿದೆ ಆದರೆ ಇದರ ನೋಂದಣಿ ಖರ್ಚು ಎಂಟು ಲಕ್ಷ ಇದೆ. ಕೈಗಾರಿಕೆಗಾಗಿ ೨ ಸಾವೀರ ಎಕರೆ ಖರೀದಿ ಯತ್ನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಮಾಜಿ ಸಚಿವ ಮುರಗೇಶ ನಿರಾಣಿ ಸಹಿತ ೬ ಜನ ಸದಸ್ಯರು. ಇದರಲ್ಲಿದ್ದಾರೆ. ಇಷ್ಟೊಂದು ಭೂಮಿ ಕೊಂಡು ೭ ಹಳ್ಳಿ ಜನರಿಗೆ ಎಷ್ಟು ಪ್ಯಾಕ್ಟರಿ ತೆರೆಯುತ್ತಾರೋ ಅದರ ಪ್ರತಿಯೊಂದಕ್ಕೂ ೧೦ ಸಾವೀರ ಜನರಿಗೆ ಉದ್ಯೋಗ ಕಲ್ಪಿಸುವರೇ ಎಂದು ಎಸ್.ಐ.ಚಿಕ್ಕನಗೌಡ್ರ ಪ್ರಶ್ನಿಸಿದರು.

ಅತ್ಯಂತ ಫಲವತ್ತಾದ ಭೂಮಿಯನ್ನು ತಮ್ಮ ಅನುಕೂಲಕ್ಕೆ‌ ಬಳಸಿಕೊಳ್ಳುವ ಹುನ್ನಾರ‌ ನಡೆದಿದೆ. ಇದರಲ್ಲಿ ಕೇಂದ್ರ ಸಚಿವರ ಪ್ರಲ್ಹಾದ್ ಜೋಶಿ, ಕೈವಾಡವಿದೆ. ಯಾವುದೇ ಕಾರಣಕ್ಕೂ ಈ ಭೂಮಿ ಬಿಟ್ಟು ಕೊಡುವುದಿಲ್ಲ. ಬಲವಂತ ಪಡಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.ಹಂತ,ಹಂತವಾಗಿ ಹೋರಾಟ ಕೈಗೊಂಡು ಅಂತಿಮವಾಗಿ ಯಾರು ಈ ಹುನ್ನರ ನಡೆಸಿದ್ದಾರೋ ಅವರ‌ ಮನೆ‌ ಮುಂದೆ ಕುಟುಂಭ ಸಮತರಾಗಿ ಆತ್ಮಹತ್ಯೆ‌ ಮಾಡಿಕೊಳ್ಳುವುದಾಗಿ ಮಾಜಿ ಶಾಸಕ ಚಿಕ್ಕನಗೌಡ್ರ ಎಚ್ಚರಿಸಿದರು.

ಕೇಂದ್ರ ಸಚಿವರು ಲೋಕಸಭಾ ಚುನಾವಣೆ ಮುನ್ನ ರೈತರ ಭೂಮಿಕ ಭೂಸ್ವಾಧೀನ ಮಾಡುವ ಮೂಲಕ ದುಡ್ಡು ಮಾಡಲು ಹೊರಟಿದ್ದಾರೆ ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಈ ಭಾಗದ ರೈತರ ಹಿತಕ್ಕಾಗಿ ನನ್ನ ಪ್ರಾಣ ಮಾತ್ಯಾಗ ಮಾಡಲು ಸಿದ್ಧ ಈ ಭಾಗದ ಜನರಿಂದ ಆಯ್ಕೆಯಾದ ಶಾಸಕರು ಕೇಂದ್ರ ಸಚಿವರು ರೈತರ ಹಿತ ಕಾಯದೆ ಕೋಟ್ಯಾಂತರ ಹಣ ಹೊಡೆಯಲು ಕೈಗಾರಿಕಾ ನೆಪದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ರೈತರು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮುಖ್ಯಮಂತ್ರಿಗಳಿಗೆ ಕೈಗಾರಿಕಾ ಸಚಿವರಿಗೆ ಭೂಸ್ವಾಧೀನ ಮಾಡಬಾರದೆಂದು ಮನವಿ ಸಲ್ಲಿಸಲಾಗಿದೆ ಅದಕ್ಕೆ ಬೇಕಾದ ದಾಖಲಾತಿ ಮಾಧ್ಯಮದವರಿಗೆ ನೀಡಿದರು . ಕೇಂದ್ರ ಸಚಿವರ ಪ್ರಭಾವ ಬಹಳಷ್ಟಿದ್ದು ಅಧಿಕಾರಿಗಳು ಅವರ ಹೇಳಿದಾಗೆ ಕೇಳುತ್ತಿದ್ದಾರೆ ಕೆಲವು ರೈತರ ಮೇಲೆ ಒತ್ತಡ ತರುತ್ತಿದ್ದಾರೆ ಬ್ಲಾಕ್ ಮಿಲ್ ಸಹ ಮಾಡುತ್ತಿದ್ದಾರೆ ನಾವು ಕೇಂದ್ರ ಸಚಿವರ ಯಾವುದೇ ಒತ್ತಡಕ್ಕೆ ಆಗಲಿ ಯಾವುದಕ್ಕೂ ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಎ.ಬಿ.ಉಪ್ಪೀನ, ನೂಲ್ವಿ, ಅದರಗುಂಚಿ ಸಹಿತ ಹಲವು ಗ್ರಾಮಗಳ ಪಂಚಾಯತಿ ಸದಸ್ಯರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.

About Editor 2

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]