ಕುಂದಗೋಳ
ಕುಂದಗೋಳ ತಾಲೂಕಿನ ಯರುಗುಪ್ಪಿ ಗ್ರಾಮದ ನಾಗಪ್ಪ ದೂಳಪ್ಪ ಸತ್ಯನಾಯ್ಕರ ಎಂಬುವರು ಮನೆಯಲ್ಲಿ ಇಂದು ಆಕಸ್ಮಿಕವಾಗಿ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಮನೆಯಲ್ಲಿ ಇರುವ ಚಿನ್ನ, ಬೆಳ್ಳಿ, ನಗದು ಹಣ, ಮುಂತಾದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಹೌದು! ಗ್ರಾಮದ ನಾಗಪ್ಪ ದೂಳಪ್ಪ ಸತ್ಯನಾಯ್ಕರ ಎಂಬುವರು ಬೆಳಿಗ್ಗೆ ಜಮೀನಿನ ಕೆಲಸಕ್ಕೆ ಹೋದಾಗ ಆಕಸ್ಮಿಕವಾಗಿ ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆ ಹಾಗೂ ಮನೆಯಲ್ಲಿ ಇರುವ ಚಿನ್ನಾಭರಣಗಳು, ನಗದು ಹಣ ಕೂಡಾ ಬೆಂಕಿಗೆ ಆಹುತಿಯಾಗಿವೆ.
ಈ ಘಟನೆಯಿಂದಾಗಿ ಬಡ ಕುಟುಂಬವು ದುಡಿಮೆ ಮಾಡಿ ಕೂಡಿಟ್ಟ ಹಣವೂ ಇಂದು ಸುಟ್ಟು ಹೋಗಿದೆ ಇದರಿಂದಾಗಿ ಈ ಕುಟುಂಬವು ಸಂಕಷ್ಟಕ್ಕೆ ಸಿಲುಕಿ ರೋಧಿಸುವ ಸನ್ನಿವೇಶ ಕಣ್ಣಿಗೆ ಕಟ್ಟಿದಂತಿದೆ.
ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Hubli News Latest Kannada News