ಕುಂದಗೋಳ : ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿರುವ ಇಂದಿರಾ ಗಾಂಧಿ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಮಾನ್ಯ ಸಿಇಓ ಅವರು ಬಾಲಕಿಯರ ಮತ್ತು ಬಾಲಕರ ವಸತಿ ಕಟ್ಟಡಗಳನ್ನು ಪರಿಶೀಲಿಸಿ, ಎಲ್ಲೆಂದರಲ್ಲಿ ನೀರು ಪೋಲಾಗುತ್ತಿರುವುದು ಮತ್ತು ಪಾಚಿ ಬೆಳೆದಿದೆ ಅಷ್ಟೇ ಅಲ್ಲದೆ ಸ್ವಚ್ಛತೆಯನ್ನು ಕಾಪಾಡಿರುವುದಿಲ್ಲ, ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ಸೂಚಿಸಿದರು. ಅಡಿಗೆ ಕೋಣೆ ಹಾಗೂ ಆಹಾರ ಸಾಮಗ್ರಿಗಳ ಸಂಗ್ರಹಿಸುವ ಕೊಠಡಿಯನ್ನು ಪರಿಶೀಲಿಸುತ್ತಿರುವ ಸಮಯದಲ್ಲಿ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದು ಕಂಡುಬಂದಿದ್ದು ಹಾಗೂ ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯಲ್ಲಿ ವಾರ್ಡನ್ ಅವರು ಶಾಲೆಯಲ್ಲಿ ಇಲ್ಲದೆ ಇರುವುದು ಕಂಡುಬಂದಿರುವುದು ರಿಂದ ಮಾನ್ಯ ಸಿಇಓ ಮೇಡಂ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ವಾರ್ಡನ್ ಮೇಲೆ ಶಿಸ್ತು ಕ್ರಮ ಜರುಗಿಸಿ ವರದಿ ನೀಡಲು ಸೂಚಿಸಿರುತ್ತಾರೆ .
ಈ ಸಂದರ್ಭದಲ್ಲಿ ಡಾ. ಮಹೇಶ್ ಕುರಿಯವರ್.ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಕುಂದಗೋಳ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಪಿಡಿಓ ಮರಿಗೌಡ ಪಾಟೀಲ್ .
ಪ್ರಾಂಶುಪಾಲರಾದ ಮುದುಕರ ಬೋಸ್ಲೆ ಮುಂತಾದವರು ಉಪಸ್ಥಿತರಿದ್ದರು.