ಕುಂದಗೋಳ : ಇಡೀ ದೇಶದ ಸಮಸ್ತ ಜನತೆಗೆ ಅನ್ನವನ್ನು ನೀಡುವ ರೈತಾಪಿ ವರ್ಗ ಇಂದು ಬೀದಿಗೆ ಬಂದು ಹೋರಾಟ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಹೌದು! ಇಂದು ಬೆಳಿಗ್ಗೆ ನಗರದ ಬ್ರಹ್ಮ ದೇವರ ದೇವಸ್ಥಾನದಿಂದ ಪ್ರತಿಭಟನಾಕಾರರು ನಗರದ ಮುಖ್ಯ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ಗಾಳಿಮರೆಮ್ಮ ದೇವಸ್ಥಾನಕ್ಕೆ ಬಂದು, ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆಯನ್ನು ನಡೆಸಿದರು.
ಇಂದು ಕುಂದಗೋಳದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೈಗೊಂಡ ಬಂದ್ ಗೆ ಕುಂದಗೋಳ ಪಟ್ಟಣವು ಸಂಪೂರ್ಣ ಬಂದ್ ಆಗಿದೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳು, ಎಲ್ಲಾ ಕ್ಲೋಸ್ ಆಗಿವೆ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಸಂಸ್ಥೆ ಕುಂದಗೋಳ ಮಾರ್ಗದ ಎಲ್ಲಾ ಬಸ್ ಗಳನ್ನು ಬಂದ್ ಮಾಡಿ ರೈತಾಪಿ ವರ್ಗ ಮಾಡಿದ ಈ ಬಂದ್ ಗೆ ಬೆಂಬಲ ನೀಡಿದೆ. ನಗರದ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಾಯಂಕಾಲ ನಾಲ್ಕು ಗಂಟೆಯ ಬಳಿಕ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಾದ ಡಾ: ಕೀರಣ ಕುಮಾರ ಎಂ ಜಂಟಿ ನಿರ್ದೇಶಕರು ಧಾರವಾಡ, ಶ್ರೀಮತಿ ರೇಣುಕಾ ದಾನನ್ನವರ ಗ್ರೇಡ್ 2 ತಹಶೀಲ್ದಾರ್ ಕುಂದಗೋಳ ಇವರುಗಳ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕೃಷಿಕ ಸಮಾಜ ನವದೆಹಲಿ ಇದರ ನೇತೃತ್ವವನ್ನು ವಹಿಸಿದ್ದು, ಹಾಗೂ ತಾಲೂಕಿನ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲವನ್ನು ನೀಡಿದ್ದವು