ಕುಂದಗೋಳ
ಯರೇಬೂದಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ನಿಮಿತ್ತವಾಗಿ ಗುಡಗೇರಿ ಪೊಲೀಸ್ ಠಾಣೆ ಪಿಎಸ್ಐ ಆದ ನವೀನ್ ಜಕ್ಕಲಿ ಅವರು ಸಾರ್ವಜನಿಕ ಹಬ್ಬಗಳನ್ನು ಕುರಿತು ಯಾವ ರೀತಿ ಆಚರಿಸಬೇಕು ಎಂದು ಹೇಳಿದರು.
ಹೌದು! ನವೀನ್ ಜಕ್ಕಲಿ ಅವರು ಗಣೇಶ ಹಬ್ಬದ ಮಹತ್ವವನ್ನು ವಿವರಿಸುತ್ತಾ ಹಬ್ಬದ ಆಚರಣೆ ಯಾವ ರೀತಿ ಮಾಡಬೇಕೆಂದು ಹೇಳುತ್ತಾ ಇಂದಿನ ದಿನಗಳಲ್ಲಿ ದೇವರ ಮೇಲಿನ ಭಯ, ಭಕ್ತಿ, ಕಡಿಮೆಯಾಗಿದೆ ಅಲ್ಲದೆ ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಮರೆತು ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಧ್ವನಿವರ್ಧಕಗಳನ್ನು ಹೇಗೆ ಬಳಸಬೇಕು ಎಂದು ಹೇಳುತ್ತಾ ಕರ್ಕಶವಾದ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಹೇಳಿದರು.
ಸಾರ್ವಜನಿಕ ಹಬ್ಬಗಳಲ್ಲಿ ತಾಯಂದಿರು ಸಹೋದರಿಯರು ಬಂದು ನಿಂತು ನೋಡುವಂತೆ ಹಬ್ಬವನ್ನು ಆಚರಿಸಬೇಕು ಅದನ್ನು ಬಿಟ್ಟು ಅವರು ನೋಡೋಕೆ ಬರದೆ ಇರುವಂತಹ ಹಾಡುಗಳನ್ನು ಹಾಕಿ ವಿಚಿತ್ರವಾಗಿ ಕುಣಿಯುವುದನ್ನು ಬಿಟ್ಟು ಎಲ್ಲರೂ ನೋಡುವಂತೆ ಹಬ್ಬವನ್ನು ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಿ ಎಸ್ ಪಾಯಣ್ಣವರ ಎಮ್ ಆರ್ ಮಂಟೂರ ಕಾರ್ಯಕ್ರಮದ ನಿರೂಪಣೆಯನ್ನು ಮುತ್ತು ಹುಂಬಿ ಅವರು ಮಾಡಿದರು ಹಾಗೂ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು , ಮಾಜಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಸಮಸ್ತ ನಾಗರಿಕರು ಉಪಸ್ಥಿತರಿದ್ದರು.