Home / ಹಬ್ಬಳ್ಳಿ ಸುದ್ದಿ / ಅಕ್ಷರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣ ಬಡಿಸಿದ ಆದರ್ಶ ಶಿಕ್ಷಕಿ : ಶ್ರೀಮತಿ ಎಸ್ ಎಫ್ ನಾಗಶೆಟ್ಟಿ

ಅಕ್ಷರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣ ಬಡಿಸಿದ ಆದರ್ಶ ಶಿಕ್ಷಕಿ : ಶ್ರೀಮತಿ ಎಸ್ ಎಫ್ ನಾಗಶೆಟ್ಟಿ

Spread the love

ಕುಂದಗೋಳ

 

ಶ್ರೀ ಕುಬೇರಪ್ಪ ಮುದಕಪ್ಪ ನಾಗಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಯರೇಬೂದಿಹಾಳ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಎಸ್ ಎಫ್ ನಾಗಶೆಟ್ಟಿ. ಅವರು ತಾವು ಕಲಿಸುವ ಪ್ರತಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ತಾಯಿ ಪ್ರೀತಿಯನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳ ಬಾಳು ಬಂಗಾರವಾಗುವುದೆ ನಮಗೆ ದೊರೆಯುವ ಪ್ರಶಸ್ತಿಯೇ ನಮಗೆ ಅತ್ಯುನ್ನತ ಪ್ರಶಸ್ತಿ ಎನ್ನುವ ಶಿಕ್ಷಕಿಯನ್ನು ಗುರುತಿಸಿ ಶಿಕ್ಷಣ ಇಲಾಖೆ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ನೀಡಿದೆ.

ಹೌದು! ಕುಂದಗೋಳದ ಸವಾಯಿ ಗಂಧರ್ವ ಹಾಲ್ ನಲ್ಲಿ ಸಪ್ಟೆಂಬರ್ 5 ರಂದು ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾನ್ಯ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಎಂ ಆರ್ ಪಾಟೀಲ್ ರವರಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಜನ ಪ್ರತಿನಿಧಿಗಳು ಹಾಗೂ ಸಂಘ ಪದಾಧಿಕಾರಿಗಳು ಶಿಕ್ಷಕರು ಉಪಸ್ಥಿತರಿದ್ದರು.

About Editor 2

Leave a Reply

Your email address will not be published. Required fields are marked *

[the_ad id="389"]