ಹುಬ್ಬಳ್ಳಿ: ಸ್ಮಾರ್ಟ್ ವಾಚ್ ಕಾರಣಕ್ಕಾಗಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಬೆಂಗೇರಿಯಲ್ಲಿ ನಡೆದಿದೆ.
ಅಸ್ಲಾಂ ಮಕಾಂದಾರ (೩೦) ಎಂಬಾತನೇ ಕೊಲೆಗೀಡಾದ ವ್ಯಕ್ತಿ.
ಮಂಜುನಾಥ ಜೋನಲ್ಲಿ ಎಂಬಾತನೇ ಚಾಕುವಿನಿಂದ ಎದೆ ಭಾಗಕ್ಕೆ ಗಂಭೀರವಾಗಿ ಇರಿದ ಪರಿಣಾಮವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಾಂನನ್ನು ಆತನ ಸ್ನೇಹಿತರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೇ ಚಿಕಿತ್ಸೆ ಫಲಕಾರಿಯಾಗದೇ ಅಸ್ಲಾಂ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿಯುತ್ತಿದ್ದ ಹಾಗೆ ಕೇಶ್ವಾಪೂರ ಹಾಗೂ ವಿದ್ಯಾನಗರ ಠಾಣೆಯ ಪೊಲೀಸರು ಕೊಲೆ ಮಾಡಿದ ಆರೋಪಿಯನ್ನು ಕೆಲವೇ ಕ್ಷಣಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಕಿಮ್ಸ್ ಆಸ್ಪತ್ರೆಗೆ ಎಸಿಪಿ ಬಾಳಪ್ಪ ನಂದಗಾವಿ, ಕೇಶ್ವಾಪೂರ ಠಾಣೆಯ ಪಿಐ ಸಾತೇನಹಳ್ಳಿ, ಪಿ.ಎಸ್.ಐ ಸದಾಶಿವ ಕಾನಟ್ಟಿ, ವಿದ್ಯಾನಗರ ಠಾಣೆಯ ಪಿಎಸ್ಐ ಶ್ರೀಮಂತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಮಾರ್ಟ್ ವಾಚ್ ವಿಚಾರವಾಗಿ ಹತ್ಯೆ ನಡೆದಿದೆ ಎನ್ನಲಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.