Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು

77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು

Spread the love

ಕುಂದಗೋಳ

ಇಂದು ಕುಂದಗೋಳದ ತಹಶೀಲ್ದಾರ್ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು
ನೂತನ ತಹಶೀಲ್ದಾರರು ಆದ ಅವರು ತಮ್ಮ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ
ಭಾರತವು ಸ್ವತಂತ್ರವಾಗಲು ಲಕ್ಷಾಂತರ ವೀರರ ಬಲಿದಾನಗಳಾಗಿದ್ದರೆ, ನಾವೆಲ್ಲರೂ ಒಂದೇ ರೀತಿಯ ಮನೋಭಾವವನ್ನು ಹೊಂದಿರಬೇಕು. ಮಹಾತ್ಮ ಗಾಂಧೀಜಿ, ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಲಕ್ಷ್ಮೀಬಾಯಿ, ಭಗತ್ ಸಿಂಗ್, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೀಗೆ ಅನೇಕ ದೇಶ ಭಕ್ತರು ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂದು ನಾವು ಇಷ್ಟು ಸುಂದರವಾದ ಜೀವನ ನಡೆಸುವುದಕ್ಕೆ ಅವರೇ ಕಾರಣ ನಾವು ನಮ್ಮ ದೇಶ ಭಕ್ತರ ಬಲಿದಾನಗಳನ್ನು ಮರೆಯಬಾರದು ಎಂದು ನೂತನ ತಹಶೀಲ್ದಾರರು ಆದ ಅಶ್ವಿನಿ ಚಡಚಣ ಅವರು ಹೇಳಿದರು.

ಶಾಸಕರಾದ ಎಂ ಆರ್ ಪಾಟೀಲ್ ಅವರ ಸಭೆಯ ಅಧ್ಯಕ್ಷತೆ ವಹಿಸಿ ನಮ್ಮ ರಾಷ್ಟ್ರವು ಸ್ವತಂತ್ರವಾಗಿ ಕನಸು ಕಂಡಿದ್ದ ಅನೇಕ ವೀರ ಯೋಧರ ಬಲಿದಾನಗಳನ್ನು ನಾವು ಮನಸಿನಲ್ಲಿ ಇಟ್ಟುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ನಗರದ ಎಲ್ಲಾ ಶಾಲಾ ವಿದ್ಯಾರ್ಥಿಗಳ ವಿವಿಧ ರೀತಿಯ ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ವಿಶೇಷವಾಗಿ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದಿದ್ದು ಬಹು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಇಓ ಡಾ.ಮಹೇಶ ಕುರಿಯವರು,ಲೋಕೋಪಯೋಗಿ ಸಹಾಯಕ ಅಧಿಕಾರಿ ಸುಧಾಕರ ಬಾಗೇವಾಡಿ,ಅರಣ್ಯ ಇಲಾಖೆ ಅಧಿಕಾರಿ ರಾಜೀಕಸಾಬ ನದಾಫ,ಕೃಷಿ ಇಲಾಖೆ ಅಧಿಕಾರಿ ಭಾರತಿ ಮೆಣಸಿನಕಾಯಿ,ಸಿಪಿಐ ಶಿವಾನಂದ ಅಂಬಿಗೇರ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪ್ರಮುಖರು ಇದ್ದರು.

About Editor 2

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]