ಹುಬ್ಬಳ್ಳಿ : ಮೂಡನಂಬಿಕೆಗೆ ಜೋತು ಬೀಳದೇ ಪ್ರತಿ ತಾಯಂದಿರೂ ನವಜಾತ ಶಿಶುಗಳಿಗೆ ಮತ್ತು ನಿಗದಿತ ಅವಧಿಯವರೆಗೆ ಮಕ್ಕಳಿಗೆ ಎದೆ ಹಾಲನ್ನು ಉಣಿಸಬೇಕು , ಇದರಿಂದ ಮಾತ್ರ ಆರೋಗ್ಯವಂತ ಮಕ್ಕಳಾಗಲು ಸಾಧ್ಯ ಎಂದು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಕಿವಿಮಾತು ಹೇಳಿದರು.
ವಿಶ್ವಸ್ತನ ಪಾನ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ರೋಟರಿ ಕ್ಲಬ್ ಎಲೈಟ್ ವತಿಯಿಂದ ಇಲ್ಲಿನ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ , ಮನೆಯಲ್ಲಿನ ಹಳೆಯ ತಲೆಮಾರಿನವರು ಹೇಳಿದ ಮಾತನ್ನು ಕೇಳಿ ಬಾಣಂತಿಯರು ಹೆಚ್ಚು ನೀರು ಕುಡಿದರೆ ಬಾಣಂತಿ ಮತ್ತು ಶಿಸುವಿಗೆ ನೆಗಡಿಯಾಗುತ್ತದೆ ಎಂದು ನಂಬಿ ನೀರು ಕುಡಿಯದೇ ಇರುವದು , ಹಳೆ ಪದ್ದತಿಯ ಕುಳ್ಳಿನ ಬೆಂಕಿಯಿಂದ ಕಾಯಿಸಿಕೊಂಡು ಅದರಿಂದ ಹೊರ ಸೂಸುವ ಬೂದಿಯಿಂದ ಉಂಟಾಗುವ ನ್ಯೂಮೋನಿಯದಂತಹ ದುಷ್ಪರಿಣಾಮಗಳಿಗಿಡಾಗದೇ , ಬಾಣಂತಿ ಸಂದರ್ಭದಲ್ಲೂ ಸಾಕಷ್ಟು ನೀರು ಕುಡಿಯಬೇಕು , ತಪ್ಪದೇ ಶಿಸುಗಳಿಗೆ ಸ್ತನಪಾನ ಮಾಡಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಎಲೈಟ್ ಕ್ಲಬ್‍ನಿಂದ ಆಸ್ಪತ್ರೆಯಲ್ಲಿನ 25ಕ್ಕೂ ಅಧಿಕ ಬಾಣಂತಿಯರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಹುಬ್ಬಳ್ಳಿ ರೋಟರಿ ಎಲೈಟ್ ಕ್ಲಬ್ ಅಧ್ಯಕ್ಷ ಅನಿಸ್ ಖೋಜೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಡಾ. ಪ್ಲೆಸ್ಸಿಲ್ಲಾ ಥಾಮಸ್ ಉದ್ಘಾಟಿಸಿದರು. ರೋಟರಿಯನ್‍ಗಳಾದ ಶೋಭಾ ಜಿಗಳೂರ , ಗುರುರಾಜ ಹೂಗಾರ , ಅಮಿತ್ ಹಬೀಬ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.