ಕನ್ನಡ ಚಿತ್ರರಂಗದ ಚಿನ್ನದ ಯುಗವು ಶುರುವಾಗಿ ಎಲ್ಲೆಡೆ ಕನ್ನಡ ಚಿತ್ರರಂಗದ್ದೆ ಸುದ್ದಿ.
ಪ್ರಪಂಚದಾದ್ಯಂತ ಸುದ್ದಿ ಮಾಡಿರುವ ಕನ್ನಡ ಚಿತ್ರಗಳು ಸಾಕಷ್ಟು ಇವೆ. ಮುಂದೆ ಸಹ ತೆರೆ ಕಾಣಲಿದೆ.
ಸದ್ಯದಲ್ಲೇ ತೆರೆಕಾಣಲಿರುವ ಪ್ಯಾನ್ ಇಂಡಿಯಾ ಚಿತ್ರ ಅಂದರೆ ಕಬ್ಜ. ಈಗಾಗಲೇ ಬಹಳ ಸುದ್ದಿ ಮಾಡಿರುವ ಈ ಚಿತ್ರ ಮಾರ್ಚ್ 17ರಂದು ಪ್ರಪಂಚದಾದ್ಯಂತ ತೆರೆ ಕಾಣಲಿದೆ.
ಇದರೊಂದಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತೆರೆ ಕಾಣಲಿರುವ ಕನ್ನಡದ ದೊಡ್ಡ ಸಿನೆಮಾ ಗಳೆಂದರೆ
ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಬರ್ಡ್ಸ್”, ಗಣೇಶ್ ಅಭಿನಯದ ಬಾನ “ದಾರಿಯಲ್ಲಿ” , ಡಾಲಿ ಅಭಿನಯದ “ಹೊಯ್ಸಳ”. ಮತ್ತು ಬೃಂದಾ ಆಚಾರ್ಯ ಅವರ ಅಭಿನಯದ “ಜೂಲಿಯೆಟ್ 2”.
ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಜೂಲಿಯೆಟ್ 2. ವಿರಾಟ್ ಗೌಡ ಅವರ ಜೂಲಿಯೆಟ್ 2 ರ ಟೀಸರ್ ಅನ್ನು ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅನಾವರಣಗೊಳಿಸಿದ್ದರು. ಮತ್ತು ಪ್ರಸಿದ್ಧ ಆನಂದ್ ಆಡಿಯೋ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು . ಬಿಡುಗಡೆಯಾದ ಒಂದೆರಡು ದಿನಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದಿರುವುದಕ್ಕೆ ಚಿತ್ರದ ನೀರಿಕ್ಷೆ ಹೆಚ್ಚಾಗಿದೆ.
ಚಿತ್ರವು ಇದೇ “ಫೆಬ್ರವರಿ 24” ರಂದು ಎಲ್ಲೆಡೆ ತೆರೆ ಕಾಣಲಿದೆ.