ಹುಬ್ಬಳ್ಳಿ : ಕಟ್ಟಡ ಕಾಮಗಾರಿಗಾಗಿ ತಂದು ಹಾಕಿರುವ ಕಬ್ಬಿಣದ ರಾಡ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ .
ಮಾರುತಿ ಬಸಪ್ಪ ಅರಣ ಶಿಕಾರಿ , ಹಾಗೂ ಪೀರ್ ಸಾಬ್ ಮಾಬುಸಾಬ್ ಕೊಲ್ಕರ್ , ಬಂಧಿತ ಆರೋಪಿಗಳಾಗಿದ್ದಾರೆ . ಆರೋಪಿತರಿಂದ ಸುಮಾರು 85,000 ಬೆಲೆ ಬಾಳುವ ಕಬ್ಬಿಣದ ರಾಡಗಳು , ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ . ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.