ಹುಬ್ಬಳ್ಳಿ : ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ನವೀಕೃತ ಜ್ಯೂಯಾಲುಕಾಸ ಮಳಿಗೆಯನ್ನು ಇಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ನವೀಕೃತ ಎರಡು ಅಂತಸ್ತಿನ ಮಳಿಗೆಯನ್ನು ಉದ್ಘಾಟನೆ ಮಾಡಲಾಗಿದ್ದು, ಜ್ಯೂಯಾಲೂಕಾಸ್ ಈಗಾಗಲೇ ದೇಶದಾದ್ಯಂತ ಹೆಸರು ಮಾಡಿದೆ. ಇದೀಗ ಹುಬ್ಬಳ್ಳಿಯಲ್ಲಿ ಕೂಡಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ವಜ್ರ, ಬಂಗಾರಾ, ಬೆಳ್ಳಿ ಆಭರಣಗಳು ಮಹಾನಗರದ ಮಹಿಳೆಯರಿಗೆ ಲಭ್ಯವಾಗಲಿದೆ. ಸಂಸ್ಥೆ ಮತ್ತು ಗ್ರಾಹಕರಿಗೆ ಇದರಿಂದ ಹೆಚ್ಚಿನ ಲಾಭ ಆಗಲಿದೆ ಎಂದರು.
ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ ಗುರುರಾಜ್ ನಾಯಕ ಕೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಜ್ಯೂಯಾಲುಕಾಸ್ ಆರಂಭಗೊಂಡು 11 ವರ್ಷ ಆಗಿದೆ. ಹುಬ್ಬಳ್ಳಿ ಗ್ರಾಹಕರ ಸಹಕಾರದಿಂದ ಬೆಳೆದಿದೆ, ಅವರಿಗೆ ಧನ್ಯವಾದಗಳು. 11 ವರ್ಷದ ಹಿನ್ನೆಲೆಯಲ್ಲಿ ವಿನೂತನವಾಗಿ ವಿನ್ಯಾಸಗೊಳಿಸಿದ್ದೇವೆ. ಇದೀಗ ಹೊಸ ಜನರೇಷನ್ ಗೆ ಬೇಕಾದ ಮಾದರಿಯಲ್ಲಿ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಎಂದರು.
ನೂತನ ಮಳಿಗೆಯಲ್ಲಿ ರೂಬಿ, ರತ್ನ, ಸಿಲ್ವರ್, ಗೋಲ್ಡ್ ವಿನ್ಯಾಸದ ಮಾದರಿ ಇದೆ. ಪ್ರತಿಯೊಂದು ಡೈಮಂಡ್, ಗೋಲ್ಡ್ ಮೇಲೆ 25% ರಿಯಾಯಿತಿ ನೀಡುತ್ತಿದ್ದೇವೆ. ಹೊಸ ಹೊಸ ಕಲೆಕ್ಷನ್ ಇವೆ. ಅತ್ಯಾಕರ್ಷಕ ದರ ಹಾಗೂ ರಿಯಾಯಿತಿ ಇದೆ. ಇಂದಿನಿಂದ ಮೂರು ದಿನ ರಿಯಾಯಿತಿ ಜತೆಗೆ ವಿಶೇಷ ಬಹುಮಾನವನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಿಟೈಲ್ ಮ್ಯಾನೇಜರ್ ರಾಜೇಶ ಕೃಷ್ಣನ್, ಸ್ಟೋರ್ ಮ್ಯಾನೇಜರ್ ಚಂದ್ರಶೇಖರ,
ಮೇಯರ್, ಸೌತ್ ಎಸಿಪಿ ಕೆ.ಕೆ.ಪಾಟೀಲ, ಮಾಜಿ ಮೇಯರ್ ಪೂರ್ಣಾ ಪಾಟೀಲ ಇದ್ದರು.