ಹುಬ್ಬಳ್ಳಿ ಜೆಸಿ ನಗರದಲ್ಲಿ ಹೊತ್ತಿ ಉರಿದ ಹೊಟೆಲ್ ಹಾಗೂ ಎಟಿಎಂ
ಹುಬ್ಬಳ್ಳಿ : ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊಟೆಲ್ ಮತ್ತು ಎಟಿಎಂ ಹೊತ್ತಿ ಉರಿದ ಘಟನೆ ನಗರದ ಜೆಸಿ ನಗರದಲ್ಲಿ ನಿನ್ನೆ ತಡರಾತ್ರಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬೆಂಕಿ ಅವಘಡದಲ್ಲಿ ಶ್ರೀಕಾಂತ್ ಗೋಕಾಕ್ ಗೆ ಸೇರಿದ ಎಲ್ಲೋರಾ ಹೋಟೆಲ್ ಭಾಗಶಃ ಹಾಗೂ ಲಕ್ಷ್ಮೀ ವಿಲಾಸ ಬ್ಯಾಂಕ್ ಎಟಿಎಂ ಸಂಪೂರ್ಣ ಸುಟ್ಟು ಕರಕಲಾಗಿದೆ .ಹೊಟೆಲ್ ನಲ್ಲಿನ ಲಕ್ಷಾಂತರ ಮೌಲ್ಯದ ಹೊಟೆಲ್ ನಲ್ಲಿದ್ದ ಸಾಮಗ್ರಿಗಳು, ದಿನಸಿ ಸುಟ್ಟು ಹೋಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Hubli News Latest Kannada News