ಹುಬ್ಬಳ್ಳಿ : ಇಬ್ಬರು ಅಂತರರಾಜ್ಯ ಕಳ್ಳರ ಬಂಧನ ಕಳ್ಳರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿ ಕೊಪ್ಪಿಕರ ರೋಡದಲ್ಲಿಯ ಜ್ಯುವೇಲರ್ಸ ಅಂಗಡಿವೊಂದರಲ್ಲಿ 50.6 ಗ್ರಾಂ ತೂಕದ ಬಂಗಾರದ ಚೈನ್ ಕಳ್ಳತ ಮಾಡಿದ್ದು ಹಾಗೂ ಧಾರವಾಡ ಶಹರ ಪೊಲೀಸ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ಒಟ್ಟು 66.6 ಗ್ರಾಂ ತೂಕದ 3,38,800 ರೂ ಮೌಲ್ಯದ ಎರಡು ಬಂಗಾರದ ಚೈನುಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರನ್ನ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವಿಚಂದ್ರ ಡಿ ಬಿ , ಪಿಎಸ್ಐ ಕವಿತಾ ಎಸ್ ಎಮ್ ಮತ್ತು ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಹು-ಧಾ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ .
