ಹುಬ್ಬಳ್ಳಿ : ಆಟೋದಲ್ಲಿ ಬಂದ ಮೂವರು ಅಪರಿಚಿತರು ಜಗಳ ತೆಗೆದು ವ್ಯಕ್ತ ಓರ್ವರಿಗೆ ಹಲ್ಲೆ ಮಾಡಿ ಮೊಬೈಲ್ , ಬಂಗಾರದ ಆಭರಣ ದೋಚಿಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿ ಕೇಶ್ವಪೂರ ಶಾಂತಿನಗರ ಚರ್ಚ್ ಬಳಿ ನಡೆದಿದೆ. 52700 ರೂ ನಗದು , 20 ಗ್ರಾಂ ಚೈನ್ , 2 ಗ್ರಾಂ ಕಿವಿ ರಿಂಗ್ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
